Tuesday, August 16, 2022

Latest Posts

ಶಿವಮೊಗ್ಗ| ಆಶ್ರಮದಲ್ಲೇ ಇದ್ದ ಸ್ವಾಮೀಜಿಗೆ ಕೊರೋನಾ: ಮಲೆನಾಡಿನಲ್ಲಿ ಆತಂಕ 

ಶಿವಮೊಗ್ಗ: ಲಾಕ್ ಡೌನ್ ವೇಳೆಯಿಂದಲೂ ಆಶ್ರಮದಲ್ಲೇ ಇದ್ದ ಸ್ವಾಮೀಜಿಗೆ ಸೋಂಕು ತಗುಲಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಜೊತೆಗೆ ಜಿಲ್ಲೆಯಲ್ಲೂ ಇದು ಆತಂಕವನ್ನು ಸೃಷ್ಟಿಸಿದೆ.

ನಗರ ಹೊರವಲಯದ ಕಲ್ಲಗಂಗೂರಿನ ಆಶ್ರಮದ ಸ್ವಾಮೀಜಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಲಾಕ್ ಡೌನ್ ಘೋಷಣೆ ಆದಾಗಿನಿಂದಲೂ ಆಶ್ರಮದಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಕೊರೋನಾ ಇರುವುದು ಕಂಡುಬಂದಿದೆ.

ಇನ್ನು ಆಶ್ರಮಕ್ಕೆ ಬಂದುಹೋದ ಭಕ್ತಾದಿಗಳ ವಿವರಗಳು ಲಭ್ಯವಿಲ್ಲ. ಹಾಗಾಗಿ ಯಾರಿಂದ ಸೋಂಕು ತಗುಲಿರಬಹುದು ಎಂಬುದನ್ನು ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಜೊತೆಗೆ ಸೋಂಕಿತ ವ್ಯಕ್ತಿ ಈಗಾಗಲೇ ಬೇರೆ ಬೇರೆ ಕಡೆ ಸಂಚರಿಸಿರುವ ಸಾಧ್ಯತೆಯೂ ಇರುವುದರಿಂದ ಸಮುದಾಯಕ್ಕೆ ಹರಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲವಾಗಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಆತಂಕ: ಇನ್ನು ಇತ್ತೀಚೆಗಷ್ಟೇ ಸರ್ಕಾರ ದೇವಾಲಯ, ಚರ್ಚ್, ಮಸೀದಿಗಳನ್ನು ತೆರೆಯಲು ಅನುಮತಿ ನೀಡಿದೆ. ಆಶ್ರಮ ವಾಸಿ ಸ್ವಾಮೀಜಿಗೇ ಸೋಂಕು ತಗುಲಿರುವುದರಿಂದ ದೇಗುಲಗಳ ಅರ್ಚಕರು, ಮಸೀದಿ ಮತ್ತು ಚರ್ಚ್ ಧರ್ಮ ಗುರುಗಳಲ್ಲಿಯೂ ಆತಂಕ ಮೂಡಿಸಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss