ಶಿವಮೊಗ್ಗ: ನಗರದ ಎನ್.ಟಿ.ರಸ್ತೆ ಮೊದಲನೆ ತಿರುವು, ದುರ್ಗಿಗುಡಿಯಲ್ಲಿ ಸರ್ಕಾರಿ ಕಚೇರಿ, ವಾಣಿಜ್ಯ ಮಳಿಗೆಗಳು ಇರುವುದರಿಂದ ಅತಿಯಾದ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿತ್ತು. ಇವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಎನ್.ಟಿ.ರಸ್ತೆಯ ಮೊದಲನೇ ತಿರುವಿನಲ್ಲಿ ಅಶೋಕ ಹೋಟೆಲ್ ನಿಂದ ಬಲಿಜ ಸೊಸೈಟಿಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ. ಬಿ.ಹೆಚ್.ರಸ್ತೆಯ ಮೊದಲನೇ ಕ್ರಾಸ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಎಲ್.ಟಿ.ಕಾಂಪ್ಲೆಕ್ಸ್ನಿಂದ ಪ್ರತಾಪ್ ಆರ್ಕೆಡ್ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದ್ದು, ಪ್ರತಾಪ್ ಆರ್ಕೇಡ್ ಪಕ್ಕದಲ್ಲಿ ಕನ್ಸರ್ವೇನ್ಸಿ ಮತ್ತು ಅಪೋಲೋ ಮೆಡಿಕಲ್ ಪಕ್ಕದ ಕನ್ಸರ್ ವೆನ್ಸಿಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.