ಹೊಸದಿಗಂತ ವರದಿ, ಶಿವಮೊಗ್ಗ :
ರಾಜ್ಯದ ಪ್ರಮುಖ ಎಪಿಎಂಸಿಗಳಲ್ಲಿ ಒಂದಾಗಿರುವ ಶಿವಮೊಗ್ಗ ಎಪಿಎಂಸಿಯಲ್ಲಿ ಡಿಸೆಂಬರ್ 21 ಮತ್ತು 22ರಂದು ಅಡಿಕೆ ವ್ಯಾಪಾರ ಬಂದ್ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ರೈತರ ಉತ್ಪನ್ನಗಳ ಮಾರಾಟ ಕಾಯಿದೆಗೆ ತಿದ್ದುಪಡಿ ತಂದಿದೆ. ಇದರಂತೆ ಎಪಿಎಂಸಿ ಒಳಗೆ ಖರೀದಿ ಮಾಡುವ ವರ್ತಕರು ಶೇ.1 ರಷ್ಟು ಸೆಸ್ ತೆರಬೇಕಿದೆ. ಹೊರಗೆ ಖರೀದಿ ಮಾಡುವವರಿಗೆ ಯಾವುದೇ ನಿರ್ಬಂಧ ಇಲ್ಲ.
ಅಡಿಕೆ ವರ್ತಕರ ಹಿತದೃಷ್ಟಿ ಯಿಂದ ಎಪಿಎಂಸಿ ಪ್ರಾಂಗಣ ಮತ್ತು ಬಾಹ್ಯ ವಲಯದಲ್ಲಿ ನಡೆಯುವ ಅಡಿಕೆ ವ್ಯಾಪಾರದ ಮೇಲೆ ಏಕ ರೂಪದ ತೆರಿಗೆ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಶಿವಮೊಗ್ಗ ಅಡಿಕೆ ವರ್ತಕರ ಸಂಘದಿಂದ ಸಾಂಕೇತಿಕವಾಗಿ ಎಲ್ಲಾ ವ್ಯವಹಾರ ಬಂದ್ ಮಾಡಲಾಗುವುದೆಂದು ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಕೆ.ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.