ಶಿವಮೊಗ್ಗ: ಯಾವುದೇ ದಾಖಲೆಗಳಲ್ಲಿದೆ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 38 ಲಕ್ಷ ರೂ.ನಗದು ಹಣ ಹಾಗೂ ಒಂದು ಕಾರನ್ನು ಅಮಾನತ್ತು ಪಡಿಸಿಕೊಂಡು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾಗಾಂಧಿ ಕಾಲೇಜಿನ ಹತ್ತಿರ ವ್ಯಕ್ತಿಯೋರ್ವ
ಯಾವುದೇ ದಾಖಲೆಗಳಲ್ಲಿದೆ ಅಕ್ರಮವಾಗಿ ಹಣವನ್ನು ಕಾರ್ ನಲ್ಲಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಾಗರ ಡಿವೈಎಸ್ಪಿ ವಿನಾಯಕ್ ಶೆಟಗೇರಿ ಮಾರ್ಗದರ್ಶನದಲ್ಲಿ, ಸಾಗರ ಟೌನ್ ಠಾಣೆ ಪಿಎಸ್ಐ
ಅಶೋಕ್ ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಹಣ ವಶಕ್ಕೆ ಪಡೆದಿದೆ.
ಬಂಧಿತನನ್ನು ಸಯ್ಯದ್ ಆಸಿಫ್ (42), ಎಸ್.ಎನ್. ನಗರ ಸಾಗರ ಟೌನ್ ಎಂದು ಗುರುತಿಸಲಾಗಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.