Saturday, July 2, 2022

Latest Posts

ಶಿವಮೊಗ್ಗ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳ ರಾತ್ರೋರಾತ್ರಿ ಕಳವು

ಶಿವಮೊಗ್ಗ: ಮನೆ ಹಿಭಾಗದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳನ್ನು ರಾತ್ರೋರಾತ್ರಿ ಕಳವು ಮಾಡಿರುವ ಘಟನೆ ತಾಲ್ಲೂಕಿನ ಕೊಮ್ಮನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕೆರೆ ಗ್ರಾಮದಲ್ಲಿ ನಡೆದಿದೆ.
ಬನ್ನಿಕೆರೆಯ ಜಗದೀಶ್ ನಾಯ್ಕ್ ಬಿನ್ ರಂಗಾನಾಯ್ಕ್ ಎಂಬುವವರಿಗೆ ಸೇರಿದ ಸುಮಾರು 60 ಸಾವಿರ ರೂ. ಮೌಲ್ಯದ ಎತ್ತುಗಳನ್ನುಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು. ಅದನ್ನು ಕಳ್ಳರು ಅಪಹರಿಸಿಕೊಂಡು ಹೋಗಿದ್ದಾರೆ.
ಶನಿವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, 11 ಗಂಟೆಗೆ ಎತ್ತುಗಳಿಗೆ ಮೇವು ಹಾಕಲಾಗಿತ್ತು. ಬೆಳಗ್ಗೆ 6 ಗಂಟೆಗೆ ನೋಡಿದಾಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತು ಕಾಣೆಯಾಗಿದ್ದವು. ಕೊಟ್ಟಿಗೆಯಿಂದ ಎತ್ತುಗಳನ್ನು ಬಿಚ್ಚಿಕೊಂಡು ಸ್ವಲ್ಪ ದೂರದವರೆಗೂ ಎಳೆದುಕೊಂಡು ಹೋಗಿ ಬಳಿಕ ವಾಹನದಲ್ಲಿ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಮಳೆಯಿಂದ ನೆಲ ಹಸಿಯಾಗಿದ್ದರಿಂದ ಎತ್ತುಗಳ ಹಾಗೂ ವಾಹನ ಚಕ್ರದ ಗುರುತು ಕಂಡು ಬಂದಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss