ಶಿವಮೊಗ್ಗ: ಕೊರೋನಾ ಪಾಸಿಟೀವ್ ಪ್ರಕರಣಗಳು ಸೊರಬ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರಿದ್ರಾ ಮಳೆಯ ಹಬ್ಬವನ್ನುತಾಲೂಕಿನಲ್ಲಿ ಆಚರಿಸದಂತೆ ಸಿಪಿಐ ಆರ್.ಡಿ. ಮರುಳುಸಿದ್ದಪ್ಪ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಪಟ್ಟಣ ಸೇರಿ ಕೆಲ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಪಾಸಿಟೀವ್ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ ಹೆಚ್ಚು ಜನ ಒಂದೆಡೆ ಸೇರಿ ಆರಿದ್ರಾ ಮಳೆ ಹಬ್ಬ ಮಾಡುವುದನ್ನು ನಿಷೇಧಿಸಲಾಗಿದೆ. ಕೊರೋನಾ ಸೋಂಕು ಈಗಾಗಲೇ ತೀವ್ರವಾಗಿ ಹಬ್ಬುತ್ತಿದ್ದು, ಜನತೆಯ ಆರೋಗ್ಯದ ದೃಷ್ಠಿಯಿಂದ ಹಬ್ಬವನ್ನು ಆಚರಿಸದಂತೆ ಸೂಚನೆ ನೀಡಿದ್ದಾರೆ.