ಶಿವಮೊಗ್ಗ: ಕೊರೋನಾ ಖರ್ಚು ವೆಚ್ಚದ ಬಗ್ಗೆ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಕಿಟ್, ಸ್ಯಾನಿಟೈಸರ್, ವೆಂಟಿಲೇಟರ್ ಖರೀದಿಯಲ್ಲಿ ಕಮೀಷನ್ ದಂಧೆ ನಡೆದಿರುವ ಮಾಹಿತಿ ಇದೆ. ಇದರ ಬಗ್ಗೆ ಲೆಕ್ಕ ಪತ್ರ ಸಮಿತಿ ಪರಿಶೀಲನೆ ಮಾಡಲು ಮುಂದಾದರೆ ಸ್ಪೀಕರ್ ಮೂಲಕ ತಡೆ ಕೊಡಿಸಿದ್ದಾರೆ. ಇದು ಅನುಮಾನ ಮೂಡಿಸಿದೆ ಎಂದು ದೂರಿದರು.
ಬೂತ್ ಹಂತದಿಂದ ಸಂಘಟನೆ…
ಜೂನ್ ೦೭ ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುವರು. ಅದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ನಂತರ ಬೂತ್ ಹಂತದಿಂದ ಪಕ್ಷವನ್ನು ಸಂಘಟನೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಪ್ರಮುಖರಾದ ಕಿಮ್ಮನೆ ರತ್ನಾಕರ್, ಆರ್ ಪ್ರಸನ್ನಕುಮಾರ್, ಭಂಡಾರಿ ಮತ್ತಿತರರು ಇದ್ದರು.