ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಕೋವಿಡ್ 19 ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ವೃದ್ಧೆಯೋರ್ವರು ಸಿಬ್ಬಂದಿ ಕಣ್ ತಪ್ಪಿಸಿ ಮನೆಗೆ ತೆರಳಿದ್ದ ಘಟನೆ ನಡೆದಿದೆ.
ತಾಲೂಕಿನ ಕುಂಸಿ ಕೆರೆಕೋಡಿ ಬಳಿಯ 72 ವರ್ಷದ ವೃದ್ಧೆಯನ್ನು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ನಾಲ್ಕು ದಿನಗಳ ಹಿಂದೆ ದಾಖಲಿಸಲಾಗಿತ್ತು. ಬೆಂಗಳೂರಿಗೆ ತೆರಳಿದ್ದ ಅಜ್ಜಿಗೆ ಸೋಂಕು ತಗುಲಿತ್ತು.
ಆದರೆ ಚಿಕಿತ್ಸೆ ಪೂರ್ಣಗೊಳ್ಳುವ ಮೊದಲೇ ಮೆಗ್ಗಾನ್ ಆಸ್ಪತ್ರೆ ಯಿಂದ ಮನೆ ಕಡೆ ದಾರಿ ಹಿಡಿದಿದ್ದಾರೆ. ಲಾಕ್ ಡೌನ್ ಇದ್ದರೂ ಸುಮಾರು 25 ಕಿಮೀ ದೂರದ ಮನೆಗೆ ಗೂಡ್ಸ್ ಆಟೋ ಒಂದರಲ್ಲಿ ಮನೆ ತಲುಪಿದ್ದರು. ಬಳಿಕ ಮನೆಯವರೇ ಮೆಗ್ಗಾನ್ ಆಸ್ಪತ್ರೆ ಗೆ ಮಾಹಿತಿ ನೀಡಿದ್ದಾರೆ. ನಂತರ ಆ್ಯಂಬುಲೆನ್ಸ್ ನಲ್ಲಿ ವೃದ್ಧೆಯನ್ನು ಕರೆದೊಯ್ಯಲಾಯಿತು ಎಂದು ಕುಂಸಿ ಗ್ರಾಮಸ್ಥರು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿ ಮನೆಗೆ ಹೋಗಿರುವುದು ಮೆಗ್ಗಾನ್ ಆಸ್ಪತ್ರೆ ನ್ಯೂನತೆಗಳಿಗೆ ಸಾಕ್ಷಿ ಎಂಬ ಮಾತುಗಳು ಕೇಳಿಬರುತ್ತಿವೆ.