Monday, July 4, 2022

Latest Posts

ಶಿವಮೊಗ್ಗ| ಕೊರೋನಾ ಹಿನ್ನೆಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸರಳ ಆಚರಣೆ

ಶಿವಮೊಗ್ಗ: ಕೊರೋನಾ ಕರಿನೆರಳಿನ ನಡುವೆಯೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಸರಳವಾಗಿ ಆಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದೇಶಿ ಶೇಕ್ ಹ್ಯಾಂಡ್ ಪದ್ಧತಿಗೆ ವಿರಾಮ ನೀಡಿ, ಭಾರತೀಯ ನಮಸ್ಕಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇಡೀ ದೇಶವೇ ಕೊರೋನಾ ಮಹಾ ಪಿಡುಗಿನ ವಿರುದ್ಧ ಒಂದಾಗಿ ಹೋರಾಟ ಮಾಡುತ್ತಿದೆ. ಈ ಸಂಕಷ್ಟದ ಸ್ಥಿತಿಯಲ್ಲೂ ದೇಶದ ಹೆಮ್ಮೆಯ ಸ್ವಾತಂತ್ರ್ಯೋತ್ಸವವನ್ನು ವಿದ್ಯಾರ್ಥಿಗಳ ಹೊರತಾಗಿ ಆಚರಿಸುವಂತಾಗಿದೆ. ಕೊರೋನಾ ಎಲ್ಲಾ ಸಾಂಪ್ರಾದಾಯಿಕ, ಸರ್ವ ಧರ್ಮಗಳ ಹಬ್ಬಹರಿದಿನಗಳ ಮೇಲೆಯೂ ಛಾಪಿಸಿದೆ ಎಂದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಹರೀಶಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಧನ್ಯಾ ಆರ್. ಭಟ್, ಕುವೆಂಪು ವಿವಿ ನಡೆಸಿದ ಅಂತಿಮ ಬಿಎ ಪದವಿ ಪರೀಕ್ಷೆಯಲ್ಲಿ ಎಚ್‍ಇಪಿ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನ ನಯನ ಡಿ. ರಾಯ್ಕರ್, ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಪಿಡಿಒ ಕೆ. ಹೋಮೇಶಪ್ಪ, ಆರೋಗ್ಯ ಇಲಾಖೆಯ ಆನಂದಪ್ಪ ಮತ್ತು ಕೊರೋನಾ ಸೋಂಕಿನಿಂದ ಗುಣಮುಖರಾದ ತಾಲ್ಲೂಕಿನ ಪ್ರಥಮ ಮಹಿಳೆ ದೇವಮ್ಮ ಹಳೇ ಸೊರಬ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ನಫೀಸಾ ಬೇಗಂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಇಒ ನಂದಿನಿ, ಸಿಪಿಐ ಮರುಳಸಿದ್ದಪ್ಪ, ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್, ಪಪಂ ಸದಸ್ಯರಾದ ಮಧುರಾಯ್ ಜಿ. ಶೇಟ್, ವೀರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ನಟರಾಜ ಉಪ್ಪಿನ, ಪ್ರೇಮಾ ಟೋಕಪ್ಪ, ಅಫ್ರೀನ್ ಮೆಹಬೂಬ್ ಬಾಷಾ, ಜಯಲಕ್ಷ್ಮೀ, ಪ್ರಭು ಮೇಸ್ತ್ರಿ ಇದ್ದರು. ಸೌಜನ್ಯ ಆನವಟ್ಟಿ, ಮಹೇಶ್ ಖಾರ್ವಿ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss