Tuesday, August 16, 2022

Latest Posts

ಶಿವಮೊಗ್ಗ| ಗಂಡು ಮಗು ಮಾರಾಟ ಯತ್ನ: ನಾಲ್ವರ ಅರೆಸ್ಟ್

ಶಿವಮೊಗ್ಗ: 15 ದಿನಗಳ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ 04 ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರದ ಗಣಪತಿ ದೇವಸ್ಥಾನದ ಹತ್ತಿರ ಮನೆಯೊಂದರಲ್ಲಿ ಒಂದು ಗಂಡು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಖಚಿತ ಮಾಹಿತಿ ಬಂದಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ತುಂಗಾನಗರ ಪೊಲೀಸರು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, 15 ದಿನಗಳ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಟಿಪ್ಪುನಗರ ವಾಸಿಗಳಾದ ಷಣ್ಮುಖ 34 ವರ್ಷ, ಸುಮಾ 29 ವರ್ಷ, ತುಳಸಿ 25 ವರ್ಷ ಮತ್ತು ಶೈಲ 32 ವರ್ಷ ಇವರುಗಳನ್ನು ಬಂಧಿಸಿದ್ದಾರೆ.
15 ದಿನಗಳ ಒಂದು ಗಂಡು ಮಗುವನ್ನು ಇವರಿಂದ ರಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss