ಶಿವಮೊಗ್ಗ: ಭಾನುವಾರ ಬೆಳ್ಳಂಬೆಳಗ್ಗೆ ಇಲ್ಲಿನ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು, ನಗರ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕರ್ತರು ಪೊರಕೆ ಹಿಡಿದು ಕಸ ಗುಡಿಸಿದರು. ಪಾಲಿಕೆ ಮೇಯರ್ ಕೂಡ ತಾವೇ ಸ್ವತಃ ಪೊರಕೆ ಹಿಡಿದು ಕಸಗುಡಿಸಿದರು.
ಇದೇನು ಪೌರಕಾರ್ಮಿಕರು ಭಾನುವಾರ ಕೆಲಸಕ್ಕೆ ಬಂದಿಲ್ಲವೇ ಎಂದು ಯೋಚಿಸುತ್ತಿದ್ದೀರಾ?! ಹಾಗೇನಿಲ್ಲ. ನಗರದ ಮಹಾತ್ಮ ಗಾಂಧಿ ಪಾರ್ಕ್ನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಭಾನುವಾರ ಈ ಸ್ವಚ್ಛತಾ ಕಾರ್ಯ ನಡೆಸಿದರು.
ಗಾಂಧಿ ಪಾರ್ಕ್ ನಲ್ಲಿ ಸ್ವಚ್ಛತೆ ಇಲ್ಲದೆ ಸಾಕಷ್ಟು ಕಸ ತುಂಬಿಕೊಂಡಿತ್ತು.
ಮಳೆಗಾಲವಾದ್ದರಿಂದ ಸಾಕಷ್ಟು ಗಿಡ-ಗಂಟಿಗಳು ಕೂಡ ಬೆಳೆದಿದ್ದವು.
ಹೆಚ್ಚಾಗಿ ಮರದ ಎಲೆ, ಗಿಡದ ಕಸ ಎಲ್ಲೆಲ್ಲೂ ತುಂಬಿಕೊಂಡಿತ್ತು. ಪಾಲಿಕೆ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡೇ ಕಸಗೂಡಿಸಿ ಗುಡ್ಡೆ ಹಾಕಿದರು. ನಂತರ ಗಾಡಿಯಲ್ಲಿ ಕಸವನ್ನು ತುಂಬಿ ಒಂದು ಕಡೆ ರಾಶಿ ಹಾಕಲಾಯಿತು. ಗಾಂಧಿ ಪುತ್ಥಳಿಯ ಸುತ್ತಮುತ್ತ
ಕಸಗುಡಿಸಿ ಸ್ವಚ್ಛ ಮಾಡಿದರು.
ಈ ವೇಳೆ ಪಾಲಿಕೆ ಮೇಯರ್ ಸುವರ್ಣಾ ಶಂಕರ್ಪಾ, ಲಿಕೆಯ ಸದಸ್ಯರುಗಳಾದ ಚನ್ನಬಸಪ್ಪ, ಪ್ರಭಾಕರ, ಸುನೀತ ಅಣ್ಣಪ್ಪ, ಪ್ರಮುಖರಾದ ಮಹೇಶ್, ಮಾಲತೇಶ್, ಬಳ್ಳೆಕೆರೆ ಸಂತೋಷ್, ಹಿರಣ್ಣಯ್ಯ, ಮೋಹನ್ ರೆಡ್ಡಿ, ಜಗದೀಶ್ ಸೇರಿ ಇತರರು ಹಾಜರಿದ್ದರು