ಹೊಸ ದಿಗಂತ ವರದಿ, ಶಿವಮೊಗ್ಗ :
ಜಿಲ್ಲಾ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್)ನೂತನ ಅಧ್ಯಕ್ಷರಾಗಿ ಎಂ.ಬಿ. ಚನ್ನವೀರಪ್ಪ ಆಯ್ಕೆಯಾದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ 9ರಂದು ಚುನಾವಣೆ ನಿಗದಿಯಾಗಿತ್ತು. ಈ ಸಂದಭರ್ದಲ್ಲಿ ಹೆಚ್.ಎಲ್. ಷಡಾಕ್ಷರಿ, ಎಂ.ಬಿ. ಚನ್ನವೀರಪ್ಪ, ಯೋಗೀಶ್ ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣೆ ನಡೆಯುವ ಸಮಯದಲ್ಲಿ ಆರು ಜನ ನಿರ್ದೇಶಕರು ಮಾತ್ರ ಹಾಜರಿದ್ದರಿಂದ ಕೋರಂ ಕೊರತೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಚುನಾವಣೆ ಮುಂದೂಡಿದ್ದರು.
ಅದರ ಮುಂದುವರಿದ ಪ್ರಕ್ರಿಯೆಯನ್ನು ಶುಕ್ರವಾರ ನಡೆಸಲಾಯಿತು. ಈ ವೇಳೆ ನಾಮಪತ್ರ ಸಲ್ಲಿಸಿದ್ದ ಹೆಚ್.ಎಲ್. ಷಡಾಕ್ಷರಿ ತಮ್ಮ ಉಮೇದುವಾರಿಕೆ ಹಿಂಪಡೆದರು. ನಿರ್ದೇಶಕ ಜೆ.ಪಿ.ಯೋಗೀಶ್ ಕೂಡ ನಾಮಪತ್ರ ಹಿಂಪಡೆಯುತ್ತಾರೆಂಬ ಮಾಹಿತಿ ಇತ್ತು. ಆದರೆ ನಾಮಪತ್ರ ಹಿಂಪಡೆಯಲು ನಿಗದಿಯಾಗಿದ್ದ ಸಮಯದ ಒಳಗೆ ಯೋಗೀಶ್ ಚುನಾವಣಾ ಅಧಿಕಾರಿಗಳ ಎದುರು ಹಾಜರಾಗುವುದು ತಡವಾಯಿತು. ಇದರಿಂದ ಚುನಾವಣಾ ಅಧಿಕಾರಿಗಳು ನಾಮಪತ್ರ ವಾಪಾಸಾತಿಗೆ ಅವಕಾಶ ನೀಡಲಿಲ್ಲ.
ಚುನಾವಣೆ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ನ ಎಲ್ಲಾ 14 ನಿರ್ದೇಶಕರು ಎಂ.ಬಿ.ಚನ್ನವೀರಪ್ಪ ಅವರನ್ನು ಬೆಂಬಲಿಸಿದ ಪರಿಣಾಮವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು.