ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಮತ್ತೆ ಮೂವರು ಪುರುಷರಲ್ಲಿ ಕೊರೋನಾ ಸೋಂಕು ಕಾಣಿಸಿದೆ. ಇದರಿಂದಾಗಿ
ಸೋಂಕಿತರ ಸಂಖ್ಯೆ 119 ಕ್ಕೆ ಏರಿದೆ.
ಶಾಹಿ ಗಾರ್ಮೆಂಟ್ಸ್ ಸೀಲ್ ಡೌನ್
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮತ್ತೊಂದು ಉದ್ಯಮವನ್ನು ಬುಧವಾರ ಸೀಲ್ ಡೌನ್ ಮಾಡಲಾಗಿದೆ. ನಗರದ ಮಾಚೇನಹಳ್ಳಿಯಲ್ಲಿರುವ ಪ್ರಖ್ಯಾತ ಶಾಹಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ತಹಶೀಲ್ದಾರ್ ನಾಗರಾಜ್ ಮತ್ತು ಸಿಬ್ಬಂದಿ ಶಾಹಿ ಗಾರ್ಮೆಂಟ್ಸ್ ಗೆ ಭೇಟಿ ನೀಡಿ ಸೀಲ್ಡೌನ್ ಪ್ರಕ್ರಿಯೆ ನಡೆಸಿದರು. ಗಾರ್ಮೆಂಟ್ಸ್ನಲ್ಲಿ ಸುಮಾರು ಹತ್ತು ಸಾವಿರ ಕಾರ್ಮಿಕರಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ನೆರೆಯ ಮಹಾರಾಷ್ಟ್ರಕ್ಕೆ ತೆರಳಿದ್ದರು. ನಂತರ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಜೂನ್ 18 ರಂದು ಕ್ವಾರಂಟೈನ್ ಅವ ಮುಗಿದ ಬಳಿಕ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. ಬುಧವಾರ ಅದರ ವರದಿ ಬಂದಿದ್ದು, ಕೊರೋನಾ ದೃಢಪಟ್ಟಿದೆ. ನಾಲ್ವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 14 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಹಶೀಲ್ದಾರ್ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಗಾರ್ಮೆಂಟ್ಸ್ನಲ್ಲಿ ಹತ್ತು ಸಾವಿರ ಮಂದಿ ಕೆಲಸ ಮಾಡುತ್ತಿರುವುದರಿಂದ ತೀವ್ರ ಆತಂಕ ಮನೆ ಮಾಡಿದೆ. ಇದು ಬಳ್ಳಾರಿಯ ಜಿಂದಾಲ್ ಅಥವಾ ಮೈಸೂರಿನ ಕಂಪನಿ ಮಾದರಿಯಲ್ಲಿ ಹರಡಿದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂಬ ಆತಂಕ ಎದುರಾಗಿದೆ.
ಕ್ವಾರಂಟೈನ್ ಉಲ್ಲಂಘನೆ; ಆರು ಮಂದಿ ಮೇಲೆ ಬಿತ್ತು ಕೇಸ್ !
ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘನೆ ಮಾಡಿದ್ದ ಒಟ್ಟು 06 ಜನರ ಮೇಲೆ ವಿವಿಧ ಠಾಣೆಗಳಲ್ಲಿ
ದೂರು ದಾಖಲಿಸಿಕೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಯಾರೇ ಕರ್ನಾಟಕಕ್ಕೆ ಬಂದಾಗ ಅವರನ್ನು ಸಾಂಸ್ಥಿಕ ಕ್ವಾರಂಟೈನ್ / ಹೋಂ ಕ್ವಾರಂಟೈನ್ ನಲ್ಲಿ ಇಡಲು ಆದೇಶವಿದೆ. ಅವರುಗಳಿಗೆ ಮೊದಲೇ ಸೂಕ್ತ ತಿಳುವಳಿಕೆಯನ್ನು ಸಹಾ ಜಿಲ್ಲಾಡಳಿತದಿಂದ ನೀಡಲಾಗಿತ್ತು.
ಆದರೂ ಹೋಂ ಕ್ವಾರಂಟೈನದೃಡಪಟ್ಟಿರುತ್ತನ ನಿಯಮಾಳಿಗಳನ್ನ ಉಲ್ಲಂಘನೆ ಮಾಡಿರುವುದು ದೃಡಪಟ್ಟಿತ್ತು. ದೊಡ್ಡಪೇಟೆ* ಪೊಲೀಸ್ ಠಾಣೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ, ಕೋಟೆ ಠಾಣೆ, ತುಂಗಾನಗರ ಠಾಣೆ, ಆನವಟ್ಟಿ ಠಾಣೆ ಹಾಗೂ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತಕುಮಾರ್ ತಿಳಿಸಿದ್ದಾರೆ.