Wednesday, August 10, 2022

Latest Posts

ಶಿವಮೊಗ್ಗ ಜಿಲ್ಲೆಯಲ್ಲಿ 249 ಜನರಲ್ಲಿ ಕೊರೋನಾ, 105 ಜನರ ಗುಣಮುಖ

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ 249 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಗುಣಮುಖರಾದ 105 ಜನರನ್ನು ಬಿಡುಗಡೆ ಮಾಡಲಾಗಿದೆ.
ಸೋಂಕಿತ 6 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 256 ಕ್ಕೆ ಏರಿಕೆಯಾಗಿದೆ. 1903 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಂದು 1116 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.
ಶಿವಮೊಗ್ಗ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 132 ಪ್ರಕರಣಗಳಿವೆ.ಶಿಕಾರಿಪುರ 39, ಭದ್ರಾವತಿ 43, ಸಾಗರದಲ್ಲಿ 14, ತೀರ್ಥಹಳ್ಳಿ 2, ಸೊರಬ 11, ಹೊಸನಗರ 1 ಪ್ರಕರಣಗಳಿದ್ದು, ಹೊರ ಜಿಲ್ಲೆಯ 7 ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss