ಶಿವಮೊಗ್ಗ : ಜಿಲ್ಲೆಯಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣಗಳು ಶುಕ್ರವಾರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 129 ಕ್ಕೆ ಏರಿಕೆಯಾಗಿದೆ. ನಗರದ ಖಾಸಗಿ ಆಸ್ಪತ್ರೆಯ ಓರ್ವ ವೈದ್ಯರಲ್ಲಿ ಕೊರೊನ ಪಾಸಿಟಿವ್ ಬಂದಿದ್ದು, ಇವರು ವಾಸವಿದ್ದ ಸ್ವಾಮಿ ವಿವೇಕಾನಂದ ಬಡಾವಣೆಯ ಮನೆ ಸೀಲ್ ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ.
ಚನ್ನಪ್ಪ ಲೇಔಟ್ನಲ್ಲಿ ಒಬ್ಬರಿಗೆ ಕೊರೊನ ಪಾಸಿಟವ್ ಕಾಣಿಸಿಕೊಂಡಿರುವುದರಿಂದ ಅವರು ಒಂದು ಒಂದು ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಬೀದಿಯ ಮನೆಗಳಿಗೆ ಸ್ಯಾನಿಟೈಜ್ ಮಾಡಲಾಗಿದೆ.
ಶಿವಮೊಗ್ಗದ ಇಬ್ಬರು, ಶಿಕಾರಿಪುರದ ಮೂವರು ಹಾಗೂ ಭದ್ರಾವತಿಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯ ಉಪ್ಪಾರ ಕೇರಿ ಸೀಲ್ ಡೌನ್ ಮಾಡಲಾಗಿದೆ.
ಶುಕ್ರವಾರ ಗುಣಮುಖರಾದ ಮೂವರನ್ನು ಬಿಡುಗಡೆ ಮಾಡಲಾಗಿದ್ದು, ೩೧ ಸಕ್ರಿಯ ಪ್ರಕರಣಗಳು ಇವೆ.