ಶಿವಮೊಗ್ಗ : ಜಿಲ್ಲೆಯಾದ್ಯಂತ ಭಾನುವಾರದ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗೆ 12 ಗಂಟೆ ನಂತರ ತರಕಾರಿ, ಮೀನು, ಮಾಂಸದ ಅಂಗಡಿಗಳನ್ನು ಬಂದ್ ಮಾಡಲಾಯಿತು.
ನಗರದ ಲಷ್ಕರ್ ಮೋಹಲ್ಲಾ ಮೀನು ಮಾರುಕಟ್ಟೆ ಸೇರಿದಂತೆ ಇತರೆ ಕಡೆಗಳಲ್ಲಿನ ಮಾಂಸ, ಮೀನು ಮಾರಾಟ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಲಷ್ಕರ್ ಮೊಹಲ್ಲಾ ಮೀನು ಮಾರುಕಟ್ಟೆಯಲ್ಲಿ ಜನ ಗುಂಪು ಸೇರಿ ಖರೀದಿಗೆ ಮುಂದಾಗಿದ್ದರಿಂದ ಗ್ರಾಹಕರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ ಘಟನೆಯೂ ನಡೆದಿದೆ.
ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ಆರಂಭವಾಗಿದ್ದು, 10ಗಂಟೆ ಬಳಿಕವೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ದೌಡಾಯಿಸಿದ ಪರಿಣಾಮ ಲಾಠಿ ಬೀಸಿ ಅವರನ್ನು ಚದುರಿಸಲಾಯಿತು.
ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಆದರೆ ಕೃಷಿ ಕೆಲಸ ಕಾರ್ಯಗಳು ಮಾತ್ರ ಅಬಾಧಿತವಾಗಿದ್ದವು.