Monday, August 8, 2022

Latest Posts

ಶಿವಮೊಗ್ಗ| ಡ್ರಗ್ಸ್ ಜಾಲ ಕಡಿವಾಣಕ್ಕೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದಿಂದ ಮನವಿ

ಶಿವಮೊಗ್ಗ: ರಾಜ್ಯದ ನೆಮ್ಮದಿ ಮತ್ತು ಹೆಸರನ್ನು ಕೆಡಿುತ್ತಿರುವ ಮಾದಕ ವಸ್ತು (ಡ್ರಗ್ಸ್) ಮಾರಾಟ ಜಾಲದ ವಿರುದ್ಧ ಮತ್ತು ಸೇವನೆಯ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರ ಬಿಜೆಪಿ ಯುವಮೋರ್ಚಾದಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.
ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಈ ಮಾಫಿಯಾದಲ್ಲಿ ಭಾಗಿಯಾಗಿರುವ ಯಾರೇ ಆಗಿದ್ದರು ಅವರನ್ನು ಬಂಧಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ರಾಜ್ಯದಿಂದ ಡ್ರಗ್ಸ್ ಎಂಬ ವಿಷಜಾಲವನ್ನು ಹಾಗೂ ತಮ್ಮ ಠಾಣೆಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿಯೂ ಕೂಡಾ ಈ ದಂಧೆಯನ್ನು ಮಟ್ಟ ಹಾಕಿ, ಡ್ರಗ್ಸ್ ಮುಕ್ತ ಕರ್ನಾಟಕ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಮಹಾನಗರಪಾಲಿಕೆ ಮೇಯರ್, ಉಪಮೇಯರ್, ಸದಸ್ಯರು, ಮಹಾಶಕ್ತಿಕೇಂದ್ರ ಅಧ್ಯಕ್ಷರು, ಮುಖಂಡರಾದ ಎಸ್. ದತ್ತಾತ್ರಿ, ಹರಿಕೃಷ್ಣ ಎಂ.ಬಿ, ಜಗದೀಶ್ ಎನ್.ಕೆ, ಸಂತೋಷ್ ಬಳ್ಳೆಕೆರೆ, ಎನ್.ಜಿ.ನಾಗರಾಜ್, ಹೃಷಿಕೇಶ ಪೈ, ಡಿ. ಮೋಹನರೆಡ್ಡಿ, ದಿನೇಶ್ ಹರಿಗೆ, ದರ್ಶನ್ ಆರ್.ವಿ., ಜಗನ್ನಾಥ್ ಟಿ.ಆರ್. ಇನ್ನಿತರರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss