Sunday, August 14, 2022

Latest Posts

ಶಿವಮೊಗ್ಗ| ದಂಡ ಹಾಕಿದ್ದಕ್ಕೆ ಪೊಲೀಸರ ಬೈಕನ್ನೇ ಕದ್ದೊಯ್ದ ಭೂಪ !

ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ಜಿಲ್ಲೆಯಲ್ಲಿ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹೀಗೆ ದಂಡ ತೆತ್ತ ಭೂಪನೋರ್ವ ಪೊಲೀಸ್ ಠಾಣೆಯಲ್ಲಿದ್ದ ಪೊಲೀಸರ ಬೈಕನ್ನೇ ಕದ್ದು ಪರಾರಿಯಾಗಿದ್ದಾನೆ
ಹೊಸನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪೊಲೀಸರು ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ವಿಧಿಸುತ್ತಿದ್ದರು. ಠಾಣೆಗೆ ತೆರಳಿ ದಂಡ ತೆತ್ತ ಯುವಕ, ಬಳಿಕ ಠಾಣೆ ಹೊರಗಡೆ ಇದ್ದ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಅವರ ಬೈಕನ್ನೇ ಕದ್ದು ಪರಾರಿಯಾಗಿದ್ದಾನೆ. ಈ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೈಕ್ ಕದ್ದ ಭೂಪನನ್ನು ಕುಂದಾಪುರದ ಚೇತನ್ ಎಂದು ಗುರುತಿಸಲಾಗಿದೆ.
ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss