Saturday, June 25, 2022

Latest Posts

ಶಿವಮೊಗ್ಗ| ನನ್ನ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ.: ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ: ನನಗೆ ಮಂತ್ರಿಯಾಗುವ ಅವಕಾಶಗಳಿದ್ದರೂ ಕೂಡ ಪ್ರಸ್ತುತ ಕಾಲಘಟ್ಟದಲ್ಲಿ ಅದು ಸಾಧ್ಯವಾಗಿರಲಿಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ವೈ. ಯಡಿಯೂರಪ್ಪನವರು ಹಾಗೂ ಸಂಸದ ಬಿ.ವೈ. ರಾಘವೇಂದ್ರರವರು ಐದುನೂರು ಕೋಟಿ ರೂ.ಗಳಿಗೂ ಮಿಕ್ಕಿದ ಆರ್ಥಿಕ ಅನುದಾನ ನೀಡಿ ರುವುದರಿಂದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ರಸ್ತೆ, ಸೇತುವೆ, ಸಮುದಾಯ ಭವನಗಳ ನಿರ್ಮಾಣ ಸಾಧ್ಯವಾಗಿದೆಯೆಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ಅವರು ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮ ಪಂಚಾಯತಿಯ ನಂಟೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ನೂತನ ಸಮುದಾಯ ಭವನ ನಿರ್ಮಾಣ, ಹೊನ್ನೆತಾಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ, ನೂತನ ಸಮುದಾಯ ಭವನ ನಿರ್ಮಾಣ ಹಾಗೂ ಶೀರೂರು ಸರಕಾರಿ ಶಾಲಾ ಆವರಣದ ನೂತನ ಸಮುದಾಯ ಭವನಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಾ ನಾನು ಈ ಹಿಂದೆ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದಾಗ ಬಂದ ಅನುದಾನದಲ್ಲಿ ಅಂದಿನ ಜಿಲ್ಲಾ ಪಂಚಾಯತಿ ಸದಸ್ಯರಾದ ಸುಚರಿತಾ ಹೆಗ್ಡೆ ಕಡಿದಾಳ್ ದಿವಾಕರ್‌ರವರ ಸಹಕಾರದಲ್ಲಿ ನಂಟೂರು ದೇವಸ್ಥಾನಕ್ಕೆ ರಸ್ತೆ ಮಾಡಿಸಿ ಕೊಟ್ಟಿದ್ದೆ. ಈಗ ನಾಲ್ಕನೆಯ ಬಾರಿಗೆ ಶಾಸಕನಾದ ನಂತರ ಪುನಃ ಈ ದೇವಸ್ಥಾನಕ್ಕೆ ರಸ್ತೆ ಮಾಡಿಸುವ ಪುಣ್ಯದ ಕೆಲಸ ಮಾಡಿದ್ದೇನೆ. ಈ ಊರಿನವರಲ್ಲದೇ ಪರವೂರಿನ ಭಕ್ತಾದಿಗಳು ಇಲ್ಲಿನ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಯಾವಾಗಲೂ ಹೇಳುತ್ತಿದ್ದರು. ಕಮ್ಮರಡಿ ಅವಿನಾಶ್ ಯುವ ಗುತ್ತಿಗೆದಾರ ಈ ರಸ್ತೆ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದು ಇವರಿಂದ ಇಲ್ಲಿಗೆ ಒಳ್ಳೆಯ ರಸ್ತೆ ನಿರ್ಮಾಣವಾಗಲಿ. ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಯ್ಯ ಹೆಗ್ಡೆ ಹಾಗೂ ಬೆಂಗಳೂರಿನ ಉದ್ಯಮಿಯಾಗಿರುವ ಇದೇ ಊರಿನ ಸುಬ್ಬಯ್ಯನವರು ಇಲ್ಲಿನ ರಸ್ತೆ ಅಭಿವೃದ್ಧಿ ಬಗ್ಗೆ ಬಹಳ ಶ್ರಮ ವಹಿಸಿದ್ದಾರೆ. ಈಗ ಹೊನ್ನೆತಾಳು ಪಂಚಾಯತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಐದು ಕೋಟಿ ಹತ್ತು ಲಕ್ಷ ರೂ ಗಳ ಅನುದಾನ ಒದಗಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಜಿ. ಪಂ. ಸದಸ್ಯೆ ಭಾರತಿ ಪ್ರಭಾಕರ್, ತಾ.ಪಂ ಉಪಾದ್ಯಕ್ಷೆ ಯಶೋಧಾ ಮಂಜುನಾಥ್, ತಾ.ಪಂ ಸದಸ್ಯೆ ಗೀತಾ ಸದಾನಂದ ‌ಶೆಟ್ಟಿ, ಯಶಸ್ವಿ ಕಡ್ತೂರು, ನಿತ್ಯಾನಂದ, ಕೃಷ್ಣಯ್ಯ ಹೆಗ್ಡೆ, ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss