ಶಿವಮೊಗ್ಗ: ಸೋಮವಾರ ಕಂಡು ಬಂದ ಕೊರೋನಾ ಪ್ರಕರಣಗಳಲ್ಲಿ ಸರ್ಕಾರಿ ವೈದ್ಯೆ ಮತ್ತು ಪೋಲಿಸರೇ ತುತ್ತಾಗಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದ ಪ್ರಮುಖ ವಾರಿಯರ್ಸ್ ಗಳೇ ಸೋಂಕಿಗೆ ಗುರಿಯಾಗಿರುವುದು ತೀವ್ರ ಆತಂಕ ಮೂಡಿಸಿದೆ.
ಶಿವಮೊಗ್ಗ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಅದೇ ವ್ಯಾಪ್ತಿಯ ಸೋಂಕಿತ ವ್ಯಕ್ತಿಯ ತಪಾಸಣೆ ಮಾಡಿದ್ದರು. ಮೂಲ ಸೋಂಕಿತ ವ್ಯಕ್ತಿ ಗುಣಮುಖರಾಗಿ ಮನೆ ಸೇರಿದ್ದಾರೆ. ಈಗ ಕ್ವಾರಂಟೈನ್ ನಲ್ಲಿದ್ದ ವೈದ್ಯೆ ಸೋಂಕಿಗೆ ತುತ್ತಾಗಿದ್ದಾರೆ.
ಪೋಲೀಸರಿಗೆ ಪಾದರಾಯನಪುರ ಗಿಪ್ಟ್…
ಬೆಂಗಳೂರು ಪಾದರಾಯನಪುರ ಗಲಾಟೆ ನಂತರ ಇಲ್ಲಿನ ಕೆಎಸ್ಆರ್ ಪಿ ಪೋಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸುಮಾರು 50 ಮಂದಿ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದ್ದು, ಅದರಲ್ಲಿ 9 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ಠಾಣೆಗೆ ಔಷಧ ಸಿಂಪರಣೆ…
ಇನ್ನು ಸೋಂಕಿಗೆ ತುತ್ತಾಗಿರುವ ಕೆಎಸ್ಆರ್ ಪಿ ಸಿಬ್ಬಂದಿ ಪುತ್ರಿ ಇಲ್ಲಿನ ಜಯನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಠಾಣೆಗೆ ಸೋಮವಾರ ಕ್ರಿಮಿನಾಶಕ ಸಿಂಪಡಿಸಲಾಗಿದೆ.