Thursday, August 11, 2022

Latest Posts

ಶಿವಮೊಗ್ಗ| ಭತ್ತದ ಗದ್ದೆ ಬಳಿ 24 ಮೊಟ್ಟೆ ಜೊತೆ ಇತ್ತು ನಾಗರಹಾವು…!

ಶಿವಮೊಗ್ಗ: ಬೇಸಿಗೆ ಭತ್ತ ಕಟಾವು ಮಾಡುತ್ತಿದ್ದ ವೇಳೆ ಬಿಲದ ಬಳಿ ಕಂಡ ನಾಗರಹಾವು ಬಗ್ಗೆ ಶೋಧಿಸಿದಾಗ 24 ಮೊಟ್ಟೆ ಜೊತೆ ಇದ್ದುದು ಕಂಡು ಬಂದಿದೆ.

ನಗರದ ಹೊರವಲಯದ ಪುರಲೆ ಗ್ರಾಮದಲ್ಲಿ ಚಂದ್ರಪ್ಪ ಎಂಬುವವರು ಬೇಸಿಗೆ ಭತ್ತ ಬೆಳೆದಿದ್ದು, ಭಾನುವಾರ ಕಟಾವು ಮಾಡುತ್ತದ್ದರು. ಆಗ ಜಮೀನಿನಲ್ಲಿ ನಾಗರಹಾವು ಕಾಣಿಸಿದೆ. ಕೂಡಲೇ ಉರಗ ತಜ್ಞ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಿರಣ್, ಬಿಲವನ್ನು ಶೋಧಿಸಿದಾಗ ಬರೋಬ್ಬರಿ 24 ಮೊಟ್ಟೆ ಜೊತೆ ಇದ್ದುದು ಕಂಡುಬಂದಿದೆ. ಕೂಡಲೇ ಮೊಟ್ಟೆ ಸಹಿತ ಹಾವನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಕಾಡಿಗೆ ಬಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss