ಶಿವಮೊಗ್ಗ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಇದೇ ಮೊದಲ ಬಾರಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಕೊರೋನಾ ಕಾಣಿಸಿದೆ. ಇದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.
ತಮಿಳುನಾಡು ಪ್ರವಾಸ ಮುಗಿಸಿದ ಬಂದಿದ್ದವರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಅವರ ಕುಟುಂಬ ಸದಸ್ಯರಲ್ಲಿ ಶುಕ್ರವಾರ ಪಾಸಿಟಿವ್ ಬಂದಿದೆ.
ಇನ್ನು ಸೋಂಕು ಕಾಣಿಸಿದ್ದ ಸೊರಬ ಮಹಿಳೆಯಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಕೊರೋನಾ ಕಂಡುಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 32 ಕ್ಕೆ ಹೆಚ್ಚಳವಾಗಿದೆ.
ಇದರಲ್ಲಿ ಓರ್ವ ಸೋಂಕಿತ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಗಾಂಧಿ ಬಜಾರ್ ಪ್ರದೇಶದಲ್ಲಿ ಓಡಾಡಿದ್ದ ಎಂದು ಸುದ್ದಿ ಹಬ್ಬಿತ್ತು. ಹಾಗಾಗಿ ಗಾಂಧಿ ಬಜಾರ್ ಪ್ರದೇಶದಲ್ಲಿ ಶುಕ್ರವಾರ ವಹಿವಾಟು ಸ್ಥಗಿತಗೊಳಿಸಲಾಯಿತು. ಬಳಿಕ ಕ್ರಿಮಿನಾಶಕವನ್ನು ಆ ಪ್ರದೇಶದಲ್ಲಿ ಸಿಂಪರಣೆ ಮಾಡಲಾಯಿತು.