Wednesday, August 17, 2022

Latest Posts

ಶಿವಮೊಗ್ಗ| ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರಿನ ಟಯರ್ ಕಳವು!

ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕುರುವಳ್ಳಿಯಲ್ಲಿ ಗುರು ಎಂಬುವವರಿಗೆ ಸೇರಿದ ಟೊಯೋಟಾ ಇನೋವಾ ಕಾರಿನ ಹಿಂಬದಿಯ ಎರಡೂ ಚಕ್ರಗಳನ್ನು ಸೆ.17 ರ ಗುರುವಾರ ರಾತ್ರಿ ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ.
ತೀರ್ಥಹಳ್ಳಿಯಿಂದ ಕೊಪ್ಪ ಹೊಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕುರುವಳ್ಳಿ ನಿವಾಸಿಗಳಾದ ಗುರು ಎಂಬುವವರು KA -02 AE-5478 ನಂಬರಿನ ತಮ್ಮ ಇನೋವಾ ಕಾರನ್ನು ಪ್ರತಿನಿತ್ಯದಂತೆ ರಾತ್ರಿ 10.30 ರ ಸಮಯದಲ್ಲಿ ಮನೆ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.
ಬೆಳಿಗ್ಗೆ ನೋಡುವುದರೊಳಗಾಗಿ ಕಾರಿನ ಹಿಂಬದಿಯ ಎರಡೂ ಚಕ್ರಗಳಿಗೆ ಕಲ್ಲು ಕೊಟ್ಟು ಡಿಸ್ಕ್ ಸಮೇತ ಟಯರ್ ಕಳ್ಳತನವಾಗಿರುವುದು ಕಂಡು ಬಂದಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಹಿಂದೆ ಕುರುವಳ್ಳಿಯಲ್ಲಿ ಇದೇ ರೀತಿಯಲ್ಲಿ ಒಮ್ನಿ ಟಯರ್ ಬಿಚ್ಚಿದ ಪ್ರಕರಣ ಮಾಸುವ ಮುನ್ನವೆ ಈ ಘಟನೆ ನಡೆದಿದ್ದು ವಾಹನ ಮಾಲೀಕರುಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!