Wednesday, July 6, 2022

Latest Posts

ಶಿವಮೊಗ್ಗ| ಈಗ ಮಲೆನಾಡಿಗೂ ವಕ್ಕರಿಸಿತು ಕೊರೋನಾ ಮಾರಿ, ಇದು ತಬ್ಲಘಿ ಗಿಫ್ಟ್?

ಶಿವಮೊಗ್ಗ; ಇದುವರೆಗೂ ಕೊರೋನಾ ಹಸಿರು ವಲಯದಲ್ಲಿ ಕಾಣಿಸಿಕೊಂಡಿದ್ದ ಮಲೆನಾಡ ಜಿಲ್ಲೆಗೆ ಕೊನೆಗೂ ಕೊರೋನಾ ವಕ್ಕರಿಸಿದೆ.
ಗುಜರಾತ್ ನ ಅಹಮದಾಬಾದ್ ನಿಂದ ಆಗಮಿಸಿದ್ದ ತಬ್ಲಿಘಿಗಳು ತಮ್ಮೊಂದಿಗೆ ಕೊರೋನಾ ವನ್ನೂ ಮಲೆನಾಡಿಗೆ ಕರೆ ತಂದಿದ್ದಾರೆ.
ಅಹಮದಾಬಾದ್ ನಿಂದ ಒಟ್ಟು ೯ ಮಂದಿ ಶನಿವಾರ ಜಿಲ್ಲೆಗೆ ಆಗಮಿಸಿದ್ದರು. ಇವರನ್ನು ತಪಾಸಣೆಗೆ ಒಳಪಡಿಸಿದಾಗ ೮ ಮಂದಿಯಲ್ಲಿ ಕೊರೋನಾ ಪಾಸಿಟಿವ್ ಆಗಿದೆ.
ಇದರಲ್ಲಿ ಓರ್ವ ತೀರ್ಥಹಳ್ಳಿ ತಾಲೂಕಿಗೆ ಸೇರಿದ್ದರೆ, ೭ ಮಂದಿ ಶಿಕಾರಿಪುರ ತಾಲೂಕಿನವರಾಗಿದ್ದಾರೆ. ಓರ್ವನಿಗೆ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭಾನುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
೨೫ ಮಂದಿ ಟೀಂ…
ಕೊರೋನಾ ಪಾಸಿಟಿವ್ ಬಂದಿರುವ ೮ ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರಿಗೆ ಚಿಕಿತ್ಸೆ ನೀಡಲು ೨೫ ಮಂದಿಯ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರೀನ್ ಜೋನ್ ಮುಂದುವರಿಕೆ…
ಜಿಲ್ಲೆಗೆ ಹೊರಗಡೆಯಿಂದ ಬಂದವರಿಂದ ಕೊರೋನಾ ಬಂದಿರುವುದರಿಂದ ಸದ್ಯ ಗ್ರೀನ್ ಜೋನ್ ಮುಂದುವರೆಯಲಿದೆ. ಆದರೆ ನಾಗರೀಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss