Wednesday, August 17, 2022

Latest Posts

ಶಿವಮೊಗ್ಗ| ಮೆಕ್ಕೆಜೋಳ, ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಆರಂಭಿಸಲು ಮನವಿ

ಶಿವಮೊಗ್ಗ : ಮೆಕ್ಕೆಜೋಳ ಮತ್ತು ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನಿಗಸಿ ಮಾಡಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ನಲ್ಲಿ ಭತ್ತ ಹಾಗೂ 70 ಸಾಇರ ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದುವರೆಗೆ ಕ್ವಿಂಟಾಲ್ ಗೆ 1800 ರೂ. ಇದ್ದ ಮೆಕ್ಕೆ ಜೋಳದ ಬೆಲೆ ಈಗ ಒಂದು ಸಾವಿರಕ್ಕೆ ಕುಸಿದಿದೆ. ಇದರಿಂದಾಗಿ ರೈತರು ನಷ್ಟದಲ್ಲಿ ಮಾರಾಟ ಮಾಡುವಂತಾಗಿದೆ. ಭತ್ತ ಕೂಡ ಇದುವರೆಗೆ ಅಧಿಕ ದರವಿತ್ತು. ಆದರೆ ಈಗ ಅದರ ಬೆಲೆಯೂ ಕುಸಿತವಾಗಿದೆ ಎಂದು ದೂರಿದ್ದಾರೆ.
ಬೆಂಬಲ ಬೆಲೆಯಲ್ಲಿ ಜೋಳ ಮತ್ತು ಭತ್ತ ಖರೀದಿ ಮಾಡಲು ಹತ್ತು ಸಾವಿರ ಕೋಟಿ ಆವರ್ತ ನಿಧಿ ಇಡಬೇಕು. ಪ್ರತೀ ಕ್ವಿಂಟಾಲ್ ಮೆಕ್ಕೆಜೋಳ ಮತ್ತು ಭತ್ತಕ್ಕೆ 3ಸಾವಿರ ರೂ. ನಿಗದಿ ಮಾಡಬೇಕು. ಇಲ್ಲದಿದ್ದರೆ ರೈತರು ನಷ್ಟದಲ್ಲಿ ಬೆಳೆ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ 30 ದಿನದೊಳಗೆ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಅಧ್ಯಕ್ಷ ಡಾ. ದೀಪಕ್ ಜೆ.ಆರ್., ಅಬ್ದುಲ್ ರಹೀಂ, ಎಸ್.ಕೆ. ರಘುವೀರ್ ಸಿಂಗ್ ಮೊದಲಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!