Sunday, August 14, 2022

Latest Posts

ಶಿವಮೊಗ್ಗ| ರಂಜದಕಟ್ಟೆ ಸಮೀಪದ ಸೇತುವೆ ಪಾರ್ಶ್ವ ಭಾಗ ಕುಸಿತ: ತೀರ್ಥಹಳ್ಳಿ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ

ಶಿವಮೊಗ್ಗ : ತೀರ್ಥಹಳ್ಳಿ ಸಮೀಪದ ರಂಜದಕಟ್ಟೆ ಬಳಿಯ ಸೇತುವೆಯ ಪಾರ್ಶ್ವ ಭಾಗ ಕುಸಿದ ಪರಿಣಾಮ ತೀರ್ಥಹಳ್ಳಿ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ಸುಮಾರು 100 ವರ್ಷಕ್ಕೂ ಹಳೆಯದಾದ ಬ್ರಿಟೀಷ್ ಕಾಲದ ಸೇತುವೆ ಇದಾಗಿದ್ದು, ಪ್ರಸ್ತುತ ಸುರಿಯುತ್ತಿರುವ ಮಳೆಯಿಂದಾಗಿ ಒಂದು ಭಾಗ ಕುಸಿದಿದೆ. ವಾಹನಗಳು ಅಪಘಾತಕ್ಕೀಡಾಗಬಹುದೆಂಬ ಉದ್ದೇಶದಿಂದ ದುರಸ್ತಿಯಾಗುವವರೆಗೆ ಸಂಚಾರ ಬಂದ್ ಮಾಡಲಾಗಿದೆ.
ಇದರಿಂದಾಗಿ ಮಣಿಪಾಲ್, ಮಂಗಳೂರು ತೆರಳುವವರಿಗೆ ಅಡಚಣೆಯಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss