Wednesday, August 10, 2022

Latest Posts

ಶಿವಮೊಗ್ಗ| ರೈತರಲ್ಲದವರು ಭೂಮಿ ಖರೀದಿಸುವುದು ಬೇಡ: ರಾಜ್ಯ ರೈತ ಸಂಘ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯ

ಶಿವಮೊಗ್ಗ: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರಲ್ಲದವರು ಭೂಮಿ ಖರೀದಿಸಲು ಅವಕಾಶ ನೀಡಿರುವುದನ್ನು ತಕ್ಷಣ ರದ್ದು ಮಾಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯಿದೆ ತಿದ್ದುಪಡಿ ಮೂಲಕ ಇಡೀ ರೈತ ಕುಲ. ಸರ್ವ ನಾಶ ಮಾಡಿ ರಿಯಲ್ ಎಸ್ಟೇಟ್ ದಂದೆಯನ್ನು ಪ್ರೋತ್ಸಾಹಿಸುವ ತಂತ್ರವಾಗಿದೆ. ಇದರಿಂದ ಬಂಡವಾಳಶಾಹಿಗಳು, ಕಂಪನಿಗಳು ಭೂಮಿ ಖರೀದಿ ಮಾಡಿ ರೈತರನ್ನು ಕೂಲಿಕಾರರನ್ನಾಗಿ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿಯೇತರ ಉದ್ದೇಶಗಳಾದ ರಿಯಲ್ ಎಸ್ಟೇಟ್, ಖಾಸಗಿ ಶಾಲೆಗಳು, ಆಸ್ಪತ್ರೆಗಳು, ಮೋಜಿ ಮಸ್ತಿಗಾಗಿ ರೆಸಾರ್ಟ್ ತಲೆ ಎತ್ತಲು ಅವಕಾಶ ಮಾಡಿದಂತಾಗಿದೆ. ಇದರಿಂದ ಆಹಾರ ಭದ್ರತೆ ನಾಶವಾಗಿ ಮುಂದೆ ಆಹಾರದ ಹಹಾಕಾರ ಉಂಟಾಗಲಿದೆ ಎಂದು ಹೇಳಿದರು.

ಪ್ರಸ್ತುತ ನಷ್ಟದಲ್ಲಿರುವ ಕೃಷಿ ಮಾಡಲು ಯುವ ಸಮುದಾಯ ಮುಂದೆ ಬರುತ್ತಿಲ್ಲ. ಇದು ಬಂಡವಾಳಶಾಹಿಗಳಿಗೆ, ಬಹುರಾಷ್ಟ್ರೀಉ ಕಂಪನಿಗಳಿಗೆ ಅನುಕೂಲ ಮಾಡಿ ಕೊಡಲಿದೆ. ಕೃಷಿ ಭೂಮಿ ಖರೀದಿಸಲು ಇರುವ 25 ಲಕ್ಷ ಮಿತಿ ತೆಗೆದು ಹಾಕಿರುವುದು ಉಳುವವನೇ ಭೂ ಒಡೆಯ ಕಾಯ್ದೆಗೆ ತದ್ವಿರುದ್ಧವಾಗಿದೆ. ಕಪ್ಪು ಹವಿರುವ ಭ್ರಷ್ಟರು ಭೂಮಿ ಖರೀದಿ ಮಾಡಿ ಬಿಳಿ ಹಣವನ್ನಾಗಿ ಮಾಡಿಕೊಳ್ಳಲಿದ್ದಾರೆ ಎಂದರು.

ಸೊಸೈಟಿ, ಬ್ಯಾಂಕ್ ಸೇರಿದಂತೆ ಇತರೆ‌ ಕಡೆಗಳಲ್ಲಿ ಸಾಲ ಮಾಡಿಕೊಂಡಿರುವ ಸಣ್ಣ ರೈತರು ಕಿರುಕುಳಕ್ಕೆ ಹೆದರಿ ಭೂಮಿ ಮಾರಾಟ ಮಾಡಿ ಕಾರ್ಮಿಕರಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss