Friday, August 19, 2022

Latest Posts

ಶಿವಮೊಗ್ಗ| ರೈತರಿಂದ ಸ್ವಾಧೀನಕ್ಕೆ ಪಡೆದ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕುಪಟ್ಟು ನೀಡುವಂತೆ ಒತ್ತಾಯ

ಹೊಸದಿಗಂತ ವರದಿ,ಶಿವಮೊಗ್ಗ:

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗಕ್ಕೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕುಪಟ್ಟು ಬೆಲೆ ನೀಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿಸರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಡಳಿತ ಸಬ್‌ರಿಜಿಸ್ಟ್ರರ್ ವ್ಯಾಲ್ಯೂ ಪ್ರಕಾರ ಎಕರೆಗೆ 2 ಲಕ್ಷ ನಿಗದಿ ಮಾಡಲು ಮುಂದಾಗಿದೆ. ಆದರೆ ಈ ವ್ಯಾಲ್ಯೂ ಬ್ರಿಟೀಷ್ ಕಾಲದ್ದಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಮ್ಮೆ ಭೂಮಿ ಕಳೆದುಕೊಂಡರೆ ಪುನಃ ಭೂಮಿ ಖರೀದಿ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಸರ್ಕಾರ ಒಂದು ಎಕರೆಗೆ 20 ಲಕ್ಷ ರೂ. ನಿಗದಿ ಮಾಡಿ ಇದರ ನಾಲ್ಕು ಪಟ್ಟು ಅಂದರೆ 80 ಲಕ್ಷ ರೂ. ಎಕರೆಗೆ ನೀಡಬೇಕು. ಇಲ್ಲದಿದ್ದರೆ ರೈತರು ಕಳೆದುಕೊಳ್ಳುವಷ್ಟು ಭೂಮಿಯನ್ನು ಬೇರೆ ಕಡೆ ಕೊಡಿಸಬೇಕೆಂದು ಹೇಳಿದರು.

ಸರ್ಕಾರ ಈ ಷರತ್ತಿಗೆ ಒಪ್ಪದಿದ್ದರೆ ಭೂಮಿ ನೀಡಲು ಸಾಧ್ಯವಿಲ್ಲ. ಅಡಿಕೆ ತೋಟಗಳಿಗೆ ಪ್ರತ್ಯೇಕ ಪರಿಹಾರವಾಗಿ ಎಕರೆಗೆ 2.50 ಕೋಟಿ ರೂ.ನೀಡಬೇಕು. ಇರುವ ಜಮೀನಿಗೆ ತೆರಳು ರಸ್ತೆ ಮಾಡಿಸಿ ಕೊಡಬೇಕು. ಭೂಮಿ ನೀಡುವ ಪ್ರತೀ ಕುಟುಂಬದ ಒಬ್ಬರಿಗೆ ವಿದ್ಯಾರ್ಹತೆ ಆಧಾರದ ಮೇಲೆ ರೈಲ್ವೆ ಇಲಾಖೆ ಅಥವಾ ರಾಜ್ಯ ಸರ್ಕಾರದಲ್ಲಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಸಂತ್ರಸ್ತರಾಗಿವ ಎಲ್ಲಾ ರೈತರೊಂದಿಗೆ ಸಭೆ ನಡೆಸಲಾಗಿದ್ದು, ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗುತ್ತಿರುವುದರಿಂದಾಗಿ ಜಮೀನು ಕೊಡಲು ಮನಸ್ಸು ಮಾಡಿದ್ದಾರೆ. ಅದರಂತೆ ಯೋಗ್ಯ ಬೆಲೆಯನ್ನು ನೀಡಬೇಕಿದೆ. ಸಂಸದ ರಾಘವೇಂದ್ರ ಜಿಲ್ಲೆಯ ಬಗ್ಗೆ ಒಳ್ಳೆಯ ಅಭಿವೃದ್ಧಿ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಪರಿಹಾರ ವಿಚಾರದಲ್ಲಿಯೂ ಗಮನ ನೀಡಬೇಕೆಂದು ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!