Friday, July 1, 2022

Latest Posts

ಶಿವಮೊಗ್ಗ ಸ್ಫೋಟ ಪ್ರಕರಣ: ಆಂಧ್ರಪ್ರದೇಶದಿಂದ ಬಂದಿತ್ತಾ ಸ್ಫೋಟಕಗಳು?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶಿವಮೊಗ್ಗದ ಹುಣಸೋಡಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಬಳಸಿದ ಸ್ಫೋಟಕಗಳನ್ನು ಆಂಧ್ರ ಪ್ರದೇಶದಿಂದ ತಂದಿರಬಹುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗದ ಸ್ಫೋಟದಲ್ಲಿ ಬಳಸಿದ ಸ್ಫೋಟಕಗಳು ನಮ್ಮ ರಾಜ್ಯದಲ್ಲಿ ಸಿಗುವುದಿಲ್ಲ. ಇವುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.

ಸ್ಫೋಟಕಗಳು ಕರ್ನಾಟಕಕ್ಕೆ ಹೇಗೆ ಬಂತು, ಶಿವಮೊಗ್ಗದವರೆಗೂ ಹೇಗೆ ತಲುಪಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸ್ಫೋಟಕಗಳನ್ನು ಗಣಿಗಾರಿಕೆಗೆ ತರಲಾಗಿದ್ದು, ದುರುದ್ದೇಶದಿಂದ ತಂದಿದ್ದರೆ ರಾಜ್ಯದಲ್ಲಿ ಭಾರಿ ಅನಾಹುತವಾಗುತ್ತಿತ್ತು ಎಂದು ತಿಳಿಸಿದರು.

ಘಟನೆಯ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದು, ರಾಜ್ಯದ ಪೊಲೀಸರೇ ತನಿಖೆ ನಡೆಸಲು ಸಮರ್ಥರಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss