Monday, July 4, 2022

Latest Posts

ಶಿವಮೊಗ್ಗ ಸ್ಫೋಟ ಪ್ರಕರಣ| ತಜ್ಞರ ತನಿಕೆಯ ಬಳಿಕವೇ ಸತ್ಯಾಂಶ ತಿಳಿಯಲಿದೆ: ಸಚಿವ ಕೆ.ಎಸ್. ಈಶ್ವರಪ್ಪ

ಹೊಸದಿಗಂತ ವರದಿ,ಶಿವಮೊಗ್ಗ:

ತಜ್ಞರು ಬಂದು ಇಲ್ಲಿರುವ ಸ್ಪೋಟಕದ ಮಾದರಿಗಳನ್ನು ತೆಗೆದುಕೊಂಡು ಹೋಗಿ ವರದಿ ನೀಡಿದ ಬಳಿಕವೇ ಹುಣಸೋಡು ಸ್ಪೋಟಕಕ್ಕೆ ಕಾರಣಗಳೇನು ಎಂಬುದು ಸ್ಪಷ್ಟವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರದಿ ಬರುವವರೆಗೆ ಘಟನೆ ಬಗ್ಗೆ ಸ್ಪಷ್ಟತೆ ಇಲ್ಲ. ತಜ್ಞರ ತಂಡ ಇಲ್ಲಿಗೆ ಆಗಮಿಸುತ್ತಿದ್ದು, ಶಾಂಪಲ್ ಗಳನ್ನು ಸಂಗ್ರಹಿಸಲಿದ್ದಾರೆ ಎಂದರು.

ಇಷ್ಟೊಂದು ಸ್ಪೋಟಕ ಎಲ್ಲಿಂದ ಬಂತು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.ಜಿಲ್ಲೆ ಮಾತ್ರವಲ್ಲದ ಹೊರ ಜಿಲ್ಲೆಯಲ್ಲಿಯೂ ಶಬ್ದ ತೀವ್ರತೆ ಆತಂಕ ಉಂಟು ಮಾಡಿದೆ. ಹೀಗಾಗಿ ಜಿಲೆಟಿನ್ ಮಾತ್ರ ಇತ್ತೋ ಅಥವಾ ಬೇರೆ ಏನಾದರೂ ಇತ್ತ ಎಂಬುದು ಗೊತ್ತಾಗಬೇಕಿದೆ ಎಂದು ಹೇಳಿದರು.

ಕಾನೂನು ಬಾಹಿರವಾಗಿಯೂ ನಡೆಯುತ್ತಿರಬಹುದು. ಹಾಗೆ ನಡೆಸಲು ಕಾರಣವೇನು ಎಂಬುದು ಗೊತ್ತಾಗಬೇಕಿದೆ. ಮೈನಿಂಗ್ ಕಾನೂನು ಬಾಹಿರವಾಗಿದ್ದರೂ ಸ್ಪೋಟಕ ಹೇಗೆ ಬಂತು ಎಂಬುತು ಖಚಿತವಾಗಬೇಕಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss