ಹೊಸದಿಗಂತ ವರದಿ,ಶಿವಮೊಗ್ಗ:
ಗುರುವಾರ ರಾತ್ರಿ ಜಿಲ್ಲೆಯಾದ್ಯಂತ ಭಾರಿ ಕಂಪನ ಉಂಟಾದ ಹಿನ್ನಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಇಂದು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ತೆರಳಿ ತುಂಗಾ ಜಲಾಶಯವನ್ನು ವೀಕ್ಷಣೆ ಮಾಡಿ ಜಲಾಶಯದ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ತುಂಗಾ ಜಲಾಶಯ ಕಾಡ ಪ್ರಾಧಿಕಾರಕ್ಕೆ ಒಳಪಡಲಿದ್ದು, ಸುಮಾರು 3 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 89,000 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯಾಜನೆಯಾಗಿದೆ.
ಈ ಯೋಜನೆ ಸಾವಿರಾರು ರೈತರಿಗೆ ಜೀವನಾಡಿಯಾಗಿದ್ದು ತುಂಗಾ ಅಚ್ಚುಕಟ್ಟು ಭಾಗದ ರೈತರು ಇದನ್ನೇ ನಂಬಿ ಬದುಕುತ್ತಿದ್ದಾರೆ.
ಭೂ ಕಂಪನದಿಂದ ಯಾವುದೇ ರೀತಿಯಲ್ಲಿ ಜಲಾಶಯಕ್ಕೆ ತೊಂದರೆಯಾಗುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.