ಶಿವಮೊಗ್ಗ: ರಾಜ್ಯದಲ್ಲೇ ಅತ್ಯಧಿಕ ಮಳೆ ಬೀಳುವ ಪ್ರದೇಶವೆಂದು ಗುರುತಿಸಿಕೊಂಡಿರುವ ಹುಲಿಕಲ್ ಗೆ ಜಿಲ್ಲಾಧಿಕಾರಿ
ಕೆ.ಬಿ. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ಶಿವಮೊಗ್ಗ-ತೀರ್ಥಹಳ್ಳಿ-ಯಡೂರು ಮಾರ್ಗವಾಗಿ ಮಂಗಳೂರು ಸಂಪರ್ಕಿಸುವ
ರಾಜ್ಯ ಹೆದ್ದಾರಿ 52 ರಲ್ಲಿ ಮಾಸ್ತಿಕಟ್ಟೆ ಹಾಗೂ ಹುಲಿಕಲ್ ತಿರುವಿನಲ್ಲಿ ರಸ್ತೆಯ ಅಂಚು ಕುಸಿದಿದೆ. ಇದು ಅಪಾಯಕಾರಿ ಆಗುವ
ಸಂಭವ ಇದೆ. ಈ ಸ್ಥಳವನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.
ಈ ಬಗ್ಗೆ ಹೊಸನಗರ ತಹಶೀಲ್ದಾರ್ ರಾಜೀವ ಜೊತೆ ಚರ್ಚಿಸಿದ ಅವರು, ಶಿವಮೊಗ್ಗದಿಂದ ನುರಿತ ಇಂಜಿನಿಯರುಗಳ ತಂಡ ಕಳಿಸುವುದಾಗಿ ತಿಳಿಸಿದರು. ಇನ್ನು ಹೊಸನಗರ ತಾಲೂಕು ನಗರ ವ್ಯಾಪ್ತಿಯ ಚಿಕ್ಕಪೇಟೆಯಲ್ಲಿ ಕೆಲ ಮನೆಗಳ ಹಿಂಭಾಗ ಗುಡ್ಡ ಕುಸಿಯುತ್ತಿರುವುದನ್ನು ವೀಕ್ಷಿಸಿದರು. ಅಲ್ಲಿರುವ ಕೊರಮ ಜನಾಂಗದವರಿಗೆ ವಸತಿಗೆ ಸೂಕ್ತ ಜಾಗ ಗುರುತಿಸಲು ಸೂಚನೆ ನೀಡಿದರು.