Tuesday, August 16, 2022

Latest Posts

ಶಿವಮೊಗ್ಗ | 6.18 ಕೋಟಿ ರೂ. ಕಾಮಗಾರಿಗೆ ಉಸ್ತುವಾರಿ ಸಚಿವ ಈಶ್ವರಪ್ಪ ಚಾಲನೆ

ಶಿವಮೊಗ್ಗ : ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು 6.18 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಶನಿವಾರ ಭೂಮಿಪೂಜೆ ನೆರವೇರಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು. ನಗರದ ಜ್ಯೋತಿ ನಗರ ಮತ್ತು ನವಲೆಯಲ್ಲಿ 60 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆಯ ಗುದ್ದಲಿ ಪೂಜೆ ನೆರವೇರಿಸಿದರು.
ಕೃಷಿ ನಗರದಲ್ಲಿ 20 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆ, ನಗರದ ಕೆಂಚಪ್ಪ ಬಡಾವಣೆ, ಕರಿಯಣ್ಣ ಬಿಲ್ಡಿಂಗ್, ನಾಗ ಚೌಡೇಶ್ವರಿ ದೇವಸ್ಥಾನ, ಲಕ್ಷ್ಮಿ ಪ್ರಾವಿಜನ್ ಸ್ಟೋರ್ ಭಾಗದಲ್ಲಿ 80 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆ, ನಗರದ ವಿನೋಬ ನಗರದಲ್ಲಿ 75 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆ, ನಗರದ ಕೃಷಿ ನಗರದಲ್ಲಿ 20 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆ, ನಗರದ ವಿಕಾಸ ಶಾಲೆ, ರಾಜ್ ಮಹಲ್‌, ಪೋಲಿಸ್ ಲೇಜೌಟ್, ಹವ್ಯಕ ಭವನ ಭಾಗದಲ್ಲಿ 70 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ
ಕಾಮಗಾರಿಗೆ ಈಶ್ವರಪ್ಪ ಭೂಮಿಪೂಜೆ ನೆರವೇರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss