Monday, August 15, 2022

Latest Posts

ಶಿವರಾಜ್ಕುಮಾರ್ ಮನೆಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಭೇಟಿ, ಯಾಕೆ ಗೊತ್ತಾ?

ಸ್ಯಾಂಡಲ್‌ವುಡ್‌ನ ನಾಯಕತ್ವ ವಹಿಸಿಕೊಂಡ ಮೇಲೆ  ಶಿವರಾಜ್‌ಕುಮಾರ್  ಮನೆಗೆ  ಅನೇಕ ಗಣ್ಯರು ‘ಭೇಟಿ  ಇದೀಗ  ಮಾಜಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಿಗೂ ಶಿವಣ್ಣನ ಬಗ್ಗೆ ಪ್ರೀತಿ-ಅಭಿಮಾನ. ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಬೆಂಗಳೂರಿನ ನಾಗಾವಾರದಲ್ಲಿರುವ ಶಿವರಾಜ್‌ಕುಮಾರ್ ಅವರ ನಿವಾಸಕ್ಕೆ ವೆಂಕಟೇಶ್ ಪ್ರಸಾದ್ ಅವರು ಇತ್ತೀಚೆಗೆ ‘ಭೇಟಿ ನೀಡಿದ್ದಾರೆ. ಒಂದಷ್ಟು ಸಮಯವನ್ನು ಜೊತೆಯಾಗಿ ಕಳೆದು, ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂಧರ್ಭ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.ಶಿವರಾಜ್‌ಕುಮಾರ್ ಅವರಿಗೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇದೆ. ಅವಕಾಶ ಸಿಕ್ಕಾಗಲೆಲ್ಲ ಅವರು ಕ್ರಿಕೆಟ್ ಆಡುತ್ತಾರೆ. ಈ ಹಿಂದೆ ಆಯೋಜನೆ ಆಗಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಗಳಲ್ಲಿ ಅವರು ಬ್ಯಾಟ್ ಬೀಸಿದ್ದರು. ಅನೇಕ ಕ್ರಿಕೆಟಿಗರ ಜೊತೆಗೆ ಅವರಿಗೆ ಸ್ನೇಹ ಇದೆ. ಅನಿಲ್ ಕುಂಬ್ಳೆ ಕೂಡ ಶಿವಣ್ಣನನ್ನು ಆಗಾಗ ಭೇಟಿ ಆಗುತ್ತಿರುತ್ತಾರೆ. ಈಗ ಕನ್ನಡದ ಮತ್ತೋರ್ವ ಹೆಮ್ಮೆಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ’ಹ್ಯಾಟ್ರಿಕ್ ಹೀರೋ’ ಮನೆಗೆ ‘ಭೇಟಿ ನೀಡಿದ್ದಾರೆ.ಸಿನಿಮಾ ವಿಚಾರಕ್ಕೆ ಬರುವುದಾದರೆ, ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ. ಅವರ ’‘ಭಜರಂಗಿ ೨’ ಚಿತ್ರ ಬಿಡುಗಡೆಗೆ ಸಿದ್ಧ ಆಗುತ್ತಿದೆ. ’ಆರ್ಡಿಎಕ್ಸ್’, ಭೈರತಿ ರಣಗಲ್’ ಮುಂತಾದ ಸಿನಿಮಾಗಳ ಬಗ್ಗೆಯೂ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ನಡುವೆ ಅವರು ಸ್ಯಾಂಡಲ್‌ವುಡ್‌ನ ನಾಯಕತ್ವ ಕೂಡ ವಹಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಜೊತೆ ಚರ್ಚಿಸಲು ಮುಂದಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss