ಹೊಸ ದಿಗಂತ ವರದಿ, ಧಾರವಾಡ:
ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ.
ಪುಷ್ಪಲತಾ ಮೇದಾರ ಮೇದಾರ ಎಸಿಬಿ ಗಾಳಕ್ಕೆ ಸಿಲುಕಿದ ಪಿಡಿಓ. ಪತಿಯ ಮೂಲಕ ಲಂಚ ಸ್ವೀಕರಿಸುವ ವೇಳೆಯಲ್ಲಿ ಎಸಿಬಿಗೆ ಬಲೆಗೆ ಬಿದ್ದಿದ್ದಾರೆ. ಗ್ರಾಮದ ಜಮೀನಿನಲ್ಲಿ ಎನ್ಎ ಮಾಡಿಸುವ ಬಗ್ಗೆ ಸಾಗರ ಹೂಗಾರ ಎಂಬುವರಿoದ ರೂ.20 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬುಧವಾರ ಪತಿ ಮಹಾಂತೇಶ ಮೂಲಕ ಲಂಚದ ಹಣ ಪಡೆಯುವ ವೇಳೆಯಲ್ಲಿ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಖೆಡ್ಡಾಕ್ಕೆ ಕೆಡವಿದ್ದಾರೆ.