Wednesday, August 17, 2022

Latest Posts

ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅದಾಗಿಯೇ ಪತನಗೊಳ್ಳಲಿದೆ: ಫಡ್ನವೀಸ್ ವಿಶ್ವಾಸ

ಮುಂಬೈ: ‘ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಗೆ ಆಸಕ್ತಿ ಇಲ್ಲ. ಆದರೆ, ಅದಾಗಿಯೇ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಬಿಜೆಪಿ ಪಕ್ಷವು ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದ್ದು , ಜನರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಅವರು ಹೇಳಿದರು.
ಆಡಳಿತಾರೂಢ ಶಿವಸೇನಾ ಮುಖ್ಯ ವಕ್ತಾರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್‌ ರಾವುತ್‌ ಅವರು ಶನಿವಾರ ರಾತ್ರಿ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಆದರೆ, ಈ ಭೇಟಿಯ ಹಿಂದೆ ರಾಜಕಾರಣವಿರಲಿಲ್ಲ. ಸಂಜಯ್‌ ರಾವುತ್‌ ಅವರು, ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕರೂ ಆಗಿದ್ದು, ದೇವೇಂದ್ರದ ಫಡ್ನವೀಸ್‌ ಅವರೊಂದಿಗೆ ನಿಗದಿಯಾಗಿರುವ ಸಂದರ್ಶನದ ಬಗ್ಗೆ ಚರ್ಚಿಸಲು ಈ ನಡೆದಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
‘ರಾವುತ್ ಅವರು ನನ್ನ ಸಂದರ್ಶನ ಕೇಳಿದ್ದರು. ಆದರೆ, ಪೂರ್ಣ ಪ್ರಮಾಣದ ಸಂದರ್ಶನ ಪ್ರಕಟಿಸಬೇಕು. ಕ್ಯಾಮರಾ ಬಳಸಲು ಅನುಮತಿ ಕೊಡಬೇಕು ಸೇರಿದಂತೆ ಸಂದರ್ಶನಕ್ಕೆ ಸೇರಿದ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆವು’ ಎಂದೂ
ಫಡ್ನವೀಸ್ ಹೇಳಿದ್ದಾರೆ.
ಫಡ್ನವೀಸ್ ಅವರು ನಮ್ಮ ಶತ್ರುವಲ್ಲ. ನಾವು ಅವರ ಜತೆ ಕೆಲಸ ಮಾಡಿದ್ದೇವೆ. ರಾಜಕೀಯ ಪ್ರತಿಸ್ಪರ್ಧಿಗಳು ಎಂದ ಮಾತ್ರಕ್ಕೆ ಅವರು ಶತ್ರುಗಳಲ್ಲ. ಸಂದರ್ಶನದ ಬಗ್ಗೆ ಮಾತನಾಡುವುದಕ್ಕಾಗಿ ಅವರನ್ನು ಭೇಟಿಯಾಗಿದ್ದೇನೆ ಎಂದು ರಾವುತ್ ಸಹ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!