Sunday, June 26, 2022

Latest Posts

ಶಿವಸೇನೆಯ ಪುಣೆ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷ ರಾಹುಲ್‌ ಶೆಟ್ಟಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿ

ಪುಣೆ: ಶಿವಸೇನೆಯ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷರೋರ್ವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ರಾಹುಲ್‌ ಶೆಟ್ಟಿ (43) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಘಟನೆ ಲೋನಾವಾಲದಲ್ಲಿ ನಡೆದಿದೆ. ಸೋಮವಾರ ಲೋನಾವಾಲದ ಜಯಚಂದ್‌ ಚೌಕ್‌ನಲ್ಲಿರುವ ತನ್ನ ಚಹಾ ಅಂಗಡಿಯ ಹೊರಗೆ ರಾಹುಲ್‌ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಗಳಲ್ಲಿ ಒಬ್ಬ ರಾಹುಲ್‌ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದರೆ, ಮತ್ತೋರ್ವ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ರಾಹುಲ್ ಮೃತ ಪಟ್ಟಿದ್ದಾರೆ.
ಈ ಬಗ್ಗೆ ರಾಹುಲ್ ಅವರ ಪತ್ನಿ, ಮಾಜಿ ಕಾರ್ಪೊರೇಟರ್‌ ಸೌಮ್ಯಾ ಎಂಬವರು ನೀಡಿರುವ ದೂರನ್ನು ಆಧರಿಸಿ ಪೊಲೀಸರು ಸೂರಜ್‌ ಅಗರ್ವಾಲ್‌ ಹಾಗೂ ದೀಪಾಲಿ ಭಿಲಾರೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss