ಚಂಡೀಗಢ: ನಟಿ ಕಂಗನಾ ರಾಣೌತ್ ನ ಇಂದು ಕಂಗನಾ ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಈ ವೇಳೆ ಟ್ವೀಟ್ ಮಾಡಿದ ಕಂಗನಾ, ಮುಂಬೈ ನ ಶಿವ ಸೇನೆ ಸೋನಿಯಾ ಸೇನೆಯಾಗಿದೆ ಎಂದು ಗುಡುಗಿದ್ದಾರೆ.
ಕಂಗನಾ ಅವರ ಮುಂಬೈ ಕಚೇರಿಯನ್ನು ಮಹಾರಾಷ್ಟ್ರ ಸರ್ಕಾರ ದ್ವಂಸಗೊಳಿಸಲು ಮುಂದಾದ ಬಿಎಂಸಿಗೆ ಸೆ.9ರಂದು ಹೈಕೋರ್ಟ್ ತಡೆ ನೀಡಿತ್ತು. ಈ ಬಳಿಕ ಕಂಗನಾ ಇಂದು ಮುಂಬೈ ನಿಂದ ಹಿಮಾಚಲ ಪ್ರದೇಶಕ್ಕೆ ತೆರಳಿದ್ದು, ಟ್ವೀಟ್ ನಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನಾನು ಚಂಡೀಗಢಕ್ಕೆ ಬಂದ ಕೂಡಲೇ ನನ್ನ ಭದ್ರತೆ ನಾಮಕಾವಸ್ತೆಗೆ ಉಳಿದಿದೆ, ಜನರು ಸಂತೋಷದಿಂದ ಶುಭಾಶಯ ಕೋರುತ್ತಿದ್ದಾರೆ, ಈ ಸಮಯದಲ್ಲಿ ನಾನು ಬದುಕುಳಿದಿದ್ದೇನೆ ಎಂದು ನನಗೆ ಅನಿಸುತ್ತಿದೆ. ಆಗೊಂದು ಸಮಯವಿತ್ತು, ಆಗ ಮುಂಬೈನಲ್ಲಿ ನನ್ನ ತಾಯಿಯ ಜೀವನದ ತಂಪನ್ನು ಅನುಭವಿಸುತ್ತಿದ್ದೆ. ಆದರೆ ಇಂದು ನನ್ನ ಜೀವ ಉಳಿದರೆ ಸಾಕು ಎನ್ನುವಷ್ಟಾಗಿದೆ. ಶಿವಸೇನೆ ಸೋನಿಯಾ ಸೈನ್ಯಕ್ಕೆ ಸೇರಿದಂತೆ ಇದೆ. ಇದರಿಂದ ಮುಂಬೈನಲ್ಲಿ ಆತಂಕದ ಧ್ವನಿ ಗಟ್ಟಿಯಾಗಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
चंडीगढ़ मे उतरते ही मेरी सिक्यरिटी नाम मात्र रह गयी है, लोग ख़ुशी से बधाई दे रेही हैं, लगता है इस बार मैं बच गयी, एक दिन था जब मुंबई में माँ के आँचल की शीतलता महसूस होती थी आज वो दिन है जब जान बची तो लाखों पाए, शिव सेना से सोनिया सेना होते ही मुंबई में आतंकी प्रशासन का बोल बाला।
— Kangana Ranaut (@KanganaTeam) September 14, 2020