Thursday, January 28, 2021

Latest Posts

ಶಿವಾರಗುಡ್ಡದ ಬಳಿ ಕರು ಮೇಯುತ್ತಿದ್ದಾಗ ಚಿರತೆ ದಾಳಿ: ಕರು ಸಾವು

ಮದ್ದೂರು: ಶಿವಾರಗುಡ್ಡದ ಬಳಿ ಕರು ಮೇಯುತ್ತಿದ್ದಾಗ ಚಿರತೆ ದಾಳಿ ಮಾಡಿ ಕರುವನ್ನು ಕೊಂದು ತಿಂದು ಪರಾರಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕೆರೆಮೇಗಲದೊಡ್ಡಿ ಗ್ರಾಮದ ಕೆ.ಪಿ. ಶಿವಸ್ವಾಮಿ ಅವರಿಗೆ ಸೇರಿದ ಕರುವಾಗಿದೆ.ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೆರೆಮೇಗಲದೊಡ್ಡಿ ಭಾಗದಲ್ಲಿ ನಿರಂತರವಾಗಿ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿವೆ. ಚಿರತೆಗಳನ್ನು ಸೆರೆಹಿಡಿಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ ಎಂದು ಕೆ.ಪಿ. ಶಿವಸ್ವಾಮಿ ಆರೋಪಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!