Monday, August 8, 2022

Latest Posts

ಶೀಘ್ರದಲ್ಲಿಯೇ ಕೃಷಿ ಮೊಬೈಲ್ ಹೆಲ್ತ್ ಕ್ಲಿನಿಕ್ , ಕೊಪ್ಪಳದಿಂದ ಪೈಲಟ್ ಪ್ರೋಗ್ರಾಂ: ಬಿ.ಸಿ.ಪಾಟೀಲ್ ಮಾಹಿತಿ

ಕೊಪ್ಪಳ: ರಾಜ್ಯದ ರೈತರ ಹಿತದೃಷ್ಠಿಯಿಂದ ಹಾಗೂ ರೈತರಿಗೆ ಇದ್ದಲ್ಲಿಯೇ ಮಾಹಿತಿ ನೀಡುವ ಉದ್ದೇಶದಿಂದ ಕೃಷಿ ಮೊಬೈಲ್ ಹೆಲ್ತ್ ಕ್ಲಿನಿಕ್ ಆರಂಭಿಸಲು ಚಿಂತನೆ ನಡೆದಿತ್ತು. ಆದರೆ ಶಿಘ್ರದಲ್ಲಿಯೇ ಕೊಪ್ಪಳದಿಂದ ಪೈಲಟ್ ಪ್ರೋಗ್ರಾಂ ಆಗಿ ಮಾಡಿ ನಂತರ ರಾಜ್ಯಾಧ್ಯಂತ ವಿಸ್ತರಿಸಲಾಗುವುದು ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಅವರು ಶನಿವಾರ ಕೊಪ್ಪಳ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಯನ್ನುದ್ದೇಶಿಸಿ ಮಾತನಾಡಿದರು.
ನಮಗೆ ರೈತರ ಹಿತ ಮುಖ್ಯ ಆದ್ದರಿಂದ ರೈತರಿಗೆ ಬೀಜ ಹಾಗೂ ಹಾಗೂ ಇನ್ನಿತರ ವಿಷಯ ಸೇರಿದಂತೆ ಅನೇಕ ವಿಷಯಗಳು ತಿಳಿದುಕೊಳ್ಳಲು ಕೃಷಿ ಆಫಿಸ್ ಗೆ ಅಲೆದಾಡುವುದು ತಪ್ಪಿಸುವ ಉದ್ದೇಶದಿಂದ ಕೃಷಿ ಮೊಬೈಲ್ ಹೆಲ್ತ ಕ್ಲಿನಿಕ್ ಆರಂಭಿಸಲಾಗುವುದು. ಅದು ಕೊಪ್ಪಳದಿಂದ ಆರಂಭಿಸಲು ಎಲ್ಲಾ ಸಿದ್ದತೆ ನಡೆದಿದೆ. ಪ್ರತಿ ಆರ್ ಎಸ್ ಕೆಗೆ ಒಂದರಂತೆ ವಾಹನ ನೀಡಲಾಗುವುದು. ರೈತರು ಒಂದು ಫೋನ್ ಮಾಡಿದರೆ ರೈತರ ಬಳಿಗೆ ಹೋಗಿ ರೈತರಿಗೆ ಕೃಷಿಯ ಮಣ್ಣಿನ ಫಲವತ್ತತೆ ಹಾಗೂ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅದರಂತೆ ಆರ್ ಎಸ್ ಕೆ ಗಳನ್ನು ಪ್ರಭಲ ಮಾಡಬೇಕು ಎಂಬ ಯೋಚನೆ ಇದೆ. ಜಾಗ ಲಭ್ಯವಾದಲ್ಲಿ ನಬಾರ್ಡ ಮೂಲಕ ಕಟ್ಟಡಗಳನ್ನು ಕಟ್ಟಿಸಿ ಆರ್ ಎಸ್ ಕೆಗಳನ್ನು ಬಲ ಪಡಿಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯಗೆ ತಿರುಗೇಟು
ಸಿಎಂಗೆ ಕೇಂದ್ರದಿಂದ ಬರುವ ಅನುದಾನ ತರುವ ಧಮ್ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಏನ್ರಿ ಇದೆಲ್ಲ ಭಾಷೆ, ಧಮ್ಮು ಕೆಮ್ಮು ಅಂತಾ ಇವೆಲ್ಲ ಒಳ್ಳೆಯ ಭಾಷೆ ಅಂತಾರವಾ? ವಿರೋಧ ಪಕ್ಷದಲ್ಲಿ ಇದ್ದು ವಿರೋಧ ಮಾಡುವುದೇ ಆದ್ಯ ಕರ್ತವ್ಯ ಅಂತಾ ತಿಳಿದುಕೊಂಡಿರಬಹುದು ಅದು ಸರಿಯಾದ ಬೆಳವಣಿಗೆ ಅಲ್ಲ ಎಂದು ತಿರುಗೇಟು ನೀಡಿದ ಅವರು, ಸಿಎಂ ಯಡಿಯೂರಪ್ಪ ಅವರಷ್ಟು ಸಭೆಗಳನ್ನು ಯಾರೂ ಮಾಡ್ತಿಲ್ಲ ಸಿಎಂ ಸಮರ್ಥವಾಗಿ ಆಡಳಿತ ಮಾಡುತ್ತಿದ್ದಾರೆ ಕೋವಿಡ್ ವಿಚಾರದಲ್ಲೂ ಎಲ್ಲ ರೀತಿಯಿಂದ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಗೆ ಚಿಕಿತ್ಸೆ ದರ ದುಬಾರಿ ವಿಚಾರಕ್ಕೆ ಮಾತನಾಡಿದ ಅವರು, ಬದುಕು ಎಲ್ಲದಕ್ಕಿಂದಲೂ ದೊಡ್ಡದು ಒಂದು ವೇಳೆ ದರ ಹೆಚ್ಚಾದರೆ ದರದ ಬಗ್ಗೆ ಮರು ಪರಿಶೀಲನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಅಪರ ಜಿಲ್ಲಾಧಿಕಾರಿ ಪಿ.ಮಾರುತಿ, ಕೃಷಿಇಲಾಖೆ ಉಪನಿರ್ದೇಶಿ ಶಬಿನಾ ಬೆಗಂ ಮತ್ತಿತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss