ಹೊಸ ದಿಗಂತ ವರದಿ ಪೊನ್ನಂಪೇಟೆ:
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಕೇಂದ್ರಕ್ಕೆ ಅತಿ ಶೀಘ್ರದಲ್ಲಿಯೇ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಪೊನ್ನಂಪೇಟೆ ನೂತನ ತಾಲೂಕು ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕೊಡಗಿನ ನಾಲ್ಕನೇ ತಾಲೂಕು ಆಗಿ ಪೊನ್ನಂಪೇಟೆಯನ್ನು ಅಧಿಕೃತವಾಗಿ ಚಾಲನೆಗೊಳಿಸಲಾಗಿದೆ.
ಅತಿ ಶೀಘ್ರದಲ್ಲೇ ಐದನೇ ತಾಲೂಕು ಕೇಂದ್ರವಾಗಿ ಕುಶಾಲನಗರವನ್ನು ಅಧಿಕೃತವಾಗಿ ಚಾಲನೆಗೊಳಿಸಲಾಗುವುದು ಎಂದು ಹೇಳಿದರು.