ಹೊಸದಿಲ್ಲಿ: ದೇಶದಲ್ಲಿ ಕಳೆದ 43 ದಿನಗಳಿಂದ ಲಾಕ್ಡೌನ್ ಪರಿಣಾಮವಾಗಿ ಸಮೂಹ ಸಾರಿಗೆ ಸ್ಥಬ್ದಗೊಂಡಿದ್ದು, ಶೀಘ್ರವೇ ಇದು ಆರಂಭವಾಗಲಿದೆ ಎಂದು ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಹೇಳಿದ್ದಾರೆ.
ದೇಶದ ವಿವಿಧ ಬಸ್, ಟ್ರಕ್ ಹಾಗೂ ಲಾರಿ ಮಾಲಿಕರ ಜೊತೆ ಮಾತುಕತೆ ನಡೆಸಿದ ಸಚಿವರು, ಹೆದ್ದಾರಿಗಳಲ್ಲಿ ಭಾರಿ ವಾಹನ ಸಂಚಾರ ಸೇರಿದಂತೆ ಸದ್ಯದಲ್ಲೇ ಎಲ್ಲ ಕಡೆ ವಾಹನ ಸಂಚಾರ ಆರಂಭವಾಗಲಿದೆ ಎಂದರು. ಇದಕ್ಕೂ ಮುನ್ನ ಕೇಂದ್ರ ಸರ್ಕಾರ, ಖಾಸಗಿ ವಾಹನ ಮಾಲಿಕರು ಮತ್ತು ಚಾಲಕ, ನಿರ್ವಾಹಕರಿಗೆ ಲಾಕ್ಡೌನ್ ಸೂತ್ರಗಳನ್ನು ಪಾಲನೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಿದೆ ಎಂದು ಗಡ್ಕರಿ ಈ ಸಂದರ್ಭದಲ್ಲಿ ತಿಳಿಸಿದರು.