Wednesday, August 10, 2022

Latest Posts

ಶೀತದ ಜೊತೆ ಕಫ ಇದೆಯಾ? ಕಫ ಏಕೆ ಕಟ್ಟುತ್ತದೆ? ಇದನ್ನು ಹೋಗಲಾಡಿಸಲು ಏನು ಮಾಡಬೇಕು?

ಮಾಮೂಲಿ ಶೀತ ಜ್ವರ ಬಂದರೆ ಅಷ್ಟು ತೊಂದರೆಯಾಗುವುದಿಲ್ಲ. ಕೆಲ ದಿನ ಇದ್ದು ಹೋಗುತ್ತದೆ. ಅದೇ ಕಫ ಜೊತೆಗೆ ಶೀತ ಅಥವಾ ಕೆಮ್ಮಾದರೆ ಭಯ. ಲಂಗ್ಸ್‌ನಲ್ಲಿ ಅಥವಾ ಥ್ರೋಟ್‌ನಲ್ಲಿ ಕಫ ಕಟ್ಟಿಕೊಂಡರೆ ನರಕಯಾತನೆ ನೀಡುತ್ತದೆ. ಉಸಿರಾಡಲು ತೊಂದರೆ, ಸ್ವಲ್ಪ ಮಾತನಾಡಿದರೂ ಕೆಮ್ಮು ಹೀಗೆ ಪ್ರತಿದಿನವೂ ನಮ್ಮನ್ನು ಕಾಡುತ್ತದೆ. ಕಫ ಏಕೆ ಕಟ್ಟುತ್ತದೆ? ಅದನ್ನು ಹೋಗಲಾಡಿಸುವುದು ಹೇಗೆ?
ಕಫ ಏಕೆ ಕಟ್ಟುತ್ತದೆ?

  • ಮಾಮೂಲಿ ಶೀತ ಅಥವಾ ಫ್ಲೂ
  • ಅಲರ್ಜಿ
  • ಮೂಗು, ಗಂಟಲು ಹಾಗೂ ಲಂಗ್ಸ್‌ನಲ್ಲಿ ಇರಿಟೇಶನ್
  • ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್
  • ಟೊಬ್ಯಾಕೋ ಸೇವನೆ
  • ನಿಮೋನಿಯಾ,ಲಂಗ್ ಕ್ಯಾನ್ಸರ್
    ಕಫ ಹೋಗಲಾಡಿಸುವುದು ಹೇಗೆ?
  • ಗಾಳಿ ಮಾಯಿಸ್ಟ್ ಆಗಿರಲಿ: ವಾತಾವರಣದಲ್ಲಿ ಡ್ರೈ ಏರ್ ಇದ್ದಾಗ, ಗಂಟಲು ಹಾಗೂ ಮೂಗಿನಲ್ಲಿ ಕಫ ಉತ್ಪತ್ತಿಯಾಗುತ್ತದೆ. ರೂಮಿನಲ್ಲಿ ಅಥವಾ ಹೆಚ್ಚು ಇರುವ ಜಾಗದಲ್ಲಿ ಕೂಲ್ ಮಿಸ್ಟ್ ಹ್ಯುಮಿಡಿಫೈರ್ ಇಟ್ಟುಕೊಳ್ಳಿ.
  • ಹೆಚ್ಚು ದ್ರವ ಸೇವಿಸಿ: ದೇಹದಲ್ಲಿ ನೀರಿನಾಂಶ ಇದ್ದರೆ ಕಫ ಕರಗುತ್ತದೆ. ಅತಿ ಹೆಚ್ಚು ಬಿಸಿ ನೀರು, ಬಿಸಿ ಪಾನೀಯಗಳನ್ನು ಕುಡಿಯುತ್ತಿದ್ದರೆ ಬೇಗ ಕರುಗುತ್ತದೆ.
  • ಉಪ್ಪು ನೀರು ಗಾರ್ಗಲ್: ಪ್ರತಿನಿತ್ಯ ಎರಡರಿಂದ ಮೂರು ಬಾರಿ ಉಪ್ಪು ನೀರು ಗರ್ಗಲ್ ಮಾಡಿದರೆ ಸ್ವಲ್ಪ ಮಟ್ಟಿಗೆ ಕಫ, ಗಂಟಲು ಕಿರಿಕಿರಿ ಹೋಗುತ್ತದೆ. ಇದನ್ನು ನಿಲ್ಲಿಸದೇ ವಾರಗಟ್ಟಲೆ ಮಾಡಿ.
  • ಬಿಸಿನೀರಿನ ಸ್ನಾನ: ಬಿಸಿನೀರಿನ ಸ್ನಾನ ದಿನಕ್ಕೆ ಎರಡು ಬಾರಿ ಮಾಡಿ. ಬಿಸಿನೀರಿನ ಹಬೆ ಜೊತೆಗೆ ಬಿಸಿ ನೀರಿನ ಸ್ನಾನ ಮಾಡಿ.
  • ಯೂಕಲಿಪ್ಟಸ್ ಎಣ್ಣೆ: ದೇಹಕ್ಕೆ ನೇರವಾಗಿ ಯೂಕಲಿಪ್ಟಸ್ ಎಣ್ಣೆ ಹಚ್ಚಬಹುದು, ಅಥವಾ ಸ್ಟೀಮ್ ತೆಗೆದುಕೊಳ್ಳುವಾಗ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬಹುದು.
  • ವಿಳೇದೆಲೆ ಜೇನುತುಪ್ಪ: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುನ್ನ ವಿಳೇದೆಲೆಗೆ ಜೇನುತುಪ್ಪ ಸವರಿ ಅದರ ರಸ ನಿಧಾನವಾಗಿ ಗಂಟಲಿಗೆ ಇಳಿಸಿ. ಇದರಿಂದಲೂ ಕಫ ಕರಗುತ್ತದೆ.
  • ಆಲ್ಕೋಹಾಲ್ ಹಾಗೂ ಕೆಫೀನ್: ಕಫ ಇರುವವರು ಕಾಫಿ ಅಥವಾ ಆಲ್ಕೋಹಾಲ್ ಸೇವನೆ ನಿಲ್ಲಿಸಿ. ಕಫ ಇರುವ ಸಮಯದಲ್ಲಿ ಮದ್ಯಪಾನ ಕಾಫಿ ಸೇವನೆಯಿಂದ ಕಫ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss