Tuesday, June 28, 2022

Latest Posts

ಶುದ್ಧ ಚಾರಿತ್ರ್ಯ

ಯುವಕ ನರೇಂದ್ರ ದಷ್ಟಪುಷ್ಟನಾಗಿದ್ದ, ಸ್ಫುರದ್ರೂಪಿ, ಅವನನ್ನು ಯಾರಾದರೂ ನೋಡಿರೆ,ಮತ್ತೆ ಮತ್ತೆ ಅವನನ್ನು ನೋಡಬೇಕು ಎನ್ನಿಸುವ ಮನೋಹರ ವ್ಯಕ್ತಿತ್ವ. ನರೇಂದ್ರನಾಥನುತನ್ನ ಬಿ.ಎ. ವ್ಯಾಸಂಗವನ್ನು ಮಾಡುತ್ತಿದ್ದಾಗ, ಒಮ್ಮೆ ಅಧ್ಯಯನ ಮಾಡಲೆಂದು ತನ್ನ ಅಜ್ಜಿಯ ಮನೆಗೆ ಹೋದನು. ಮೊದಲನೆಯ ಅಂತಸ್ತಿನಲ್ಲಿದ್ದ ಕೋಣೆಯಲ್ಲಿ ಅವನು ಓದುತ್ತಿದ್ದಾಗ, ಯುವತಿಯೊಬ್ಬಳು ಅವನ ಕೋಣೆಯ ಹೊರಗೆ ಬಂದು ನಿಂತಿದ್ದಾಳೆ. ಬಾಲ್ಯವಿವಾಹದ ಕಾರಣದಿಂದ ಯೌವ್ವನದಲ್ಲೇ ಅವಳು ವಿವಾಹವಾಗಿ, ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಳು. ಈಗ ಯುವಕ ನರೇಂದ್ರನ ಕಡೆ ಆಕೆ ಆಕರ್ಷಿತಳಾಗಿ, ಅವನ ಬಳಿ ಬಂದುನಿಂತಿದ್ದಾಳೆ. ಇದಾವುದನ್ನೂ ಅರಿಯದ ನರೇಂದ್ರ ಓದುವುದರಲ್ಲಿ  ನಿರತನಾಗಿದ್ದ.

ಒಮ್ಮೆ ಅವನು ತಲೆಎತ್ತಿ ನೋಡಿದಾಗ, ಅವಳು ನಿಂತಿರುವುದನ್ನು ನರೇಂದ್ರನು ಕಂಡನು.ಸ್ವಲ್ಪ ಸಮಯದಲ್ಲೇ ಅವಳ ಬಳಿ ಮಾತನಾಡುತ್ತಿರುವಾಗ, ಯುವತಿಯ ಮನಸ್ಸಿನ ಆಸೆ ನರೇಂದ್ರನಿಗೆ ತಿಳಿಯಿತು.

ತಕ್ಷಣವೇ ನರೇಂದ್ರನು ಕೈಮುಗಿದು,‘‘ನೀನು ನನ್ನ ಸಹೋದರಿಯಂತೆ, ನನ್ನ ತಾಯಿಯಂತೆ. ದಯವಿಟ್ಟು ನಿನ್ನ ಶರೀರ,ಮನಸ್ಸುಗಳನ್ನು ಹಾಳುಮಾಡಿಕೊಳ್ಳಬೇಡ. ನಿನ್ನ ಮನೆಗೆ ಹಿಂತಿರುಗು’’ ಎಂದನು. ಇಬ್ಬರೂ ಒಂಟಿಯಾಗಿ ಇದ್ದ ಸಂದರ್ಭವದು. ಇಂದಿನ ಯುವಕ-ಯುವತಿಯರಿಗೆ ಇದು ದಾರಿದೀಪವಾಗಬಾರದೇಕೆ?

– ಸ್ವಾಮಿ ಶಾಂತಿವ್ರತಾನಂದ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss