Saturday, June 25, 2022

Latest Posts

ಶುದ್ಧ ಮನಸ್ಸಿನಿಂದ ನೋಡಿದರೆ ಜಗತ್ತೆಲ್ಲಾ ಸುಂದರವಾಗಿ ಕಾಣುತ್ತದೆ: ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಹೊಸದಿಗಂತ ವರದಿ, ನಾಗಮಂಗಲ:

ಮನುಷ್ಯ ತನ್ನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಪ್ರಪಂಚದಲ್ಲಿ ಯಾವುದೇ ವಸ್ತು ಅಥವಾ “ಷಯವನ್ನು ನೋಡಿದಾಗ ಅದು ಸುಂದರವಾಗಿಯೇ ಕಾಣುತ್ತದೆ. ನಮ್ಮ ಮನಸ್ಸು ಹೇಗಿರುತ್ತದೋ ಹಾಗೆಯೇ ನಮಗೆ ಜಗತ್ತು ಕಾಣುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಟಿ.ಬಿ ಬಡಾವಣೆಯಲ್ಲಿ ಇರುವ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ, ಕ್ರೆಡಾ ಚುಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸೋಮವಾರ ಆಶೀರ್ವಚನ ನೀಡಿದರು.
ನಮ್ಮ ಮನಸ್ಸನ್ನು ಸಂತೈಸಿದರೆ ನಡೆನುಡಿಗಳ ಮೂಲಕ ಸ್ವರ್ಗವನ್ನು ಕಾಣಲು ಸಾಧ್ಯ. ಸಾಧಕರಿಗೂ ಹಾಗೂ ನಿಮಗೂ ನಮಗೂ ಇರುವುದು ಒಂದೇ ರೀತಿಯ ಮನಸ್ಸು, ಅದನ್ನು ಉತ್ತಮವಾಗಿ ಬಳಕೆ ಮಾಡಿಕೊಂಡವರು ಒಳ್ಳೆಯ ಸ್ಥಾನಕ್ಕೆ ತಲುಪುತ್ತಾರೆ ಎಂದರು.
ಸಮಾಜ ನಿಮ್ಮನ್ನು ಗೌರವಿಸುವುದೇ ವಾಸ್ತವವಾದ ಶ್ರೀಮಂತಿಕೆಯಾಗಿದೆ. ನಮ್ಮ ಮನಸ್ಸಿನ ಧ್ವನಿಗೆ ಉತ್ತರ ನೀಡುವಷ್ಟು ಬೆಳೆದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ವನ್ನು ಅಧ್ಯಯನ ಮಾಡುತ್ತಾ ಮುಂದುವರಿದಂತೆ ನಮ್ಮ ನಾಲಿಗೆ, ಮನಸ್ಸು ಪರಿಪಕ್ವವಾಗುತ್ತವೆ. ಯಾರ ಮನಸ್ಸು ಉತ್ತಮ ನಿರ್ದೇಶನ ನೀಡುತ್ತದೋ ಅವರೇ ನಿಜವಾದ ಶ್ರೇಷ್ಠ ವ್ಯಕ್ತಿಯಾಗುತ್ತಾರೆ. ಹಾಗೆ ಕುವೆಂಪು ಅವರ ಮನಸ್ಸಿನ ಒಳ್ಳೆಯ ಅಂಶಗಳು ಸುಂದರ ಸಾ”ತ್ಯ ದರ್ಶನ ಮಾಡಿಸಿವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss