Tuesday, August 16, 2022

Latest Posts

ಶುರುವಾಗಿದೆ ಪಡೀಲ್‌ನ ಆಸ್ಪತ್ರೆಗೆ ಕೊರೋನಾ ಹೇಗೆ ಬಂತು ಎಂಬ ಸೋಂಕಿನ ಮೂಲ ಪತ್ತೆ ಕಾರ್ಯ!

ಮಂಗಳೂರು: ಕೊರೋನಾ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕೊರೋನಾ ಹೇಗೆ ಬಂತು ಎಂಬ ನಿಟ್ಟಿನಲ್ಲಿ ಪತ್ತೆ ಕಾರ್ಯ ಆಗುತ್ತಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಅಂಕಿ ಅಂಶವನ್ನು ರಾಜ್ಯ ಸರಕಾರವು ಕೇರಳ ಸರಕಾರದಿಂದ ಪಡೆಯಬೇಕಾಗಿದೆ. ಆ ಬಳಿಕ ಮೂಲ ಪತ್ತೆ ತನಿಖೆ ಸಮರ್ಪಕವಾಗಲಿದೆ ಎಂದು ಜಿಲ್ಲಾ ಆರೋಗ್ಯಾಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಜ.30ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಕೇರಳದಿಂದ ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಫೆಬ್ರವರಿ ತಿಂಗಳಿನಿಂದ ಚಿಕಿತ್ಸೆ ಪಡೆದವರ ಮಾಹಿತಿ ಕೋರಲಾಗಿದೆ. ಫೆ.1ರಿಂದ ಕೇರಳದಿಂದ ಹೊರ ರೋಗಿಗಳಿಗಾಗಿ 1200ಕ್ಕೂ ಅದಿಕ ಮಂದಿ ಹಾಗೂ ಒಳರೋಗಿಗಳಾಗಿ 177 ಮಂದಿ ಚಿಕಿತ್ಸೆ ಪಡೆದಿರುವ ಮಾಹಿತಿ ಇದೆ. ಇವರಲ್ಲಿ ಯಾರಿಗಾದರೂ ಸೋಂಕು ದೃಢವಾಗಿದೆಯೇ ಅಥವಾ ಕ್ವಾರಂಟೈನ್‌ಗೊಳಪಟ್ಟಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯನ್ನು ಕೇರಳ ಸರಕಾರದಿಂದ ಕೋರುವಂತೆ ಜಿಲ್ಲಾಡಳಿತ ಎರಡು ದಿನಗಳ ಹಿಂದೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ ಎಂದವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!