Thursday, July 7, 2022

Latest Posts

ಶುರುವಾಗಿದೆ ಮಿಡತೆಯ ದಾಳಿ: ಆತಂಕದಲ್ಲಿದೆ ‘ದೇವರ ಸ್ವಂತ ನಾಡು’ ಕೇರಳ

ಕಾಸರಗೋಡು: ಉತ್ತರ ಭಾರತದ ಕೆಲವು ರಾಜ್ಯಗಳ ಕೃಷಿಕರನ್ನು ಕಂಗಾಲಾಗಿಸಿರುವ ಮಿಡತೆ ಹಾವಳಿ ಕೇರಳಕ್ಕೂ ಕಾಲಿರಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. ಈ ಬಗ್ಗೆ ಗರಿಷ್ಠ ಜಾಗ್ರತೆ ಪಾಲಿಸುವ ಅಗತ್ಯ ಇದೆಯೆಂದು ಕೇರಳ ಕೃಷಿ ವಿಶ್ವ ವಿದ್ಯಾಲಯ ತಿಳಿಸಿದೆ. ಗಾಳಿ ಬೀಸುವ ದಿಕ್ಕಿಗೆ ಹೊಂದಿಕೊಂಡು ಮಿಡತೆಗಳು ಸಂಚಾರ ನಡೆಸುತ್ತಿದ್ದು , ಈ ನಿಟ್ಟಿನಲ್ಲಿ ಪಾಲಕ್ಕಾಡು ಜಿಲ್ಲೆಯ ಗಡಿ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಬೇಕು ಎಂದು ವಿಶ್ವ ವಿದ್ಯಾಲಯ ನಿರ್ದೇಶಿಸಿದೆ. ಈಗಾಗಲೇ ಉತ್ತರ ಭಾರತದ ವಿವಿಧ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಕೃಷಿ ಹಾನಿಗೊಳಿಸಿದ ಮಿಡತೆಗಳ ನಿಯಂತ್ರಣಕ್ಕೆ ಕೇರಳ ಸರಕಾರವು ವಿಶೇಷ ಗಮನ ಹರಿಸಿದೆ. ಅಲ್ಲದೆ ರಾಜ್ಯಕ್ಕೆ ಮಿಡತೆಗಳ ಹಾವಳಿ ಎದುರಾದರೆ ಡ್ರೋನ್ ಬಳಸಿ ಹತೋಟಿಗೆ ತರಲು ಯೋಜನೆ ರೂಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss