ಹೊಸದಿಗಂತ ಆನ್ಲೈನ್ ಡೆಸ್ಕ್:
ಮೊಬೈಲ್ ಗೇಮ್ಗಳನ್ನು ಅಕ್ಷರಶಃ ಆಳಿದ್ದ ಪಬ್ಜಿ ಮತ್ತೆ ದೇಶದೊಳಕ್ಕೆ ಕಾಲಿಡಲು ಕಸರತ್ತು ಆರಂಭಿಸಿದೆ.
೨೦೧೯ರ ಸೆಪ್ಟೆಂಬರ್ನಲ್ಲಿ ಚೀನಾ ಮೂಲದ ಈ ಪಜ್ಜಿಯನ್ನು ದೇಶದ ಐಕ್ಯತೆ, ಭದ್ರತೆಗೆ ಧಕ್ಕೆ ತರುವ ಆರೋಪದ ಮೇಲೆ ನಿಷೇಧಿಸಲಾಗಿತ್ತು. ನಿಷೇಧವಾಗಿರುವ ಪಬ್ಜಿ ಈಗ ಮತ್ತೆ ದೇಶದ ಮೊಬೈಲ್ಗಳಲ್ಲಿ ಸ್ಥಾನ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಪಬ್ಜಿಯ ಒಡೆತನ ಹೊಂದಿರುವ ಪ್ರಸಿದ್ಧ ಮೊಬೈಲ್ ಗೇಮಿಂಗ್ ಕಂಪನಿ ಕರಫ್ಟನ್ ಐಎನ್ಸಿ ತನ್ನ ಸಂಸ್ಥೆಯಲ್ಲಿ ಭಾರತೀಯ ಮೂಲದವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿದ್ದು, ಜೊತೆಗೆ ಭಾರತ ಸರ್ಕಾರದ ಜತೆ ಹಲವು ಹಂತಗಳಲ್ಲಿ ಒಪ್ಪಿಗೆ ಪಡೆಯಲು ಯತ್ನಿಸುತ್ತಿದೆ. ಸಂಸ್ಥೆಯಲ್ಲಿ ವಿಶುವಲ್ ಕಂಟೆಂಟ್ ಡಿಸಿಎ ಆಗಿ ಆಕಾಶ ಜುಂಬೆ, ಫೈನಾನ್ಸ್ ಮ್ಯಾನೇಜರ್ ಆಗಿ ಪಿಯೂಶ್ ಅಗರವಾಲ್, ಹಿರಿಯ ಸಾಮುದಾಯಿಕ ಪ್ರಬಂಧಕಿಯಾಗಿ ಅರ್ಪಿತಾ ಪ್ರಿಯದರ್ಶಿನಿ, ಹಿರಿಯ ಇ-ಸ್ಪೋಟ್ಸ್ ಮ್ಯಾನೇಜರ್ ಆಗಿ ಕರಣ್ ಪಥಕ್, ಅನೀಶ್ ಅರವಿಂದ ಅವರನ್ನು ಕಂಟ್ರಿ ಮ್ಯಾನೇಜರ್ ಆಗಿ ನೇಮಕಗೊಳಿಸಲಾಗಿದೆ.