Tuesday, July 5, 2022

Latest Posts

ಶುರುವಾಗುತ್ತಾ ಕಾಸರಗೋಡು- ಮಂಗಳೂರು ನಡುವೆ ಮತ್ತೆ ಬಸ್ಸು ಸಂಚಾರ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಲಾಕ್ ಡೌನ್ ಯಿಂದ ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿರುವ ಕಾಸರಗೋಡು- ಮಂಗಳೂರು ನಡುವಿನ ಬಸ್ಸು ಸಂಚಾರ ಪುನರಾರಂಭಿಸುವ ಕುರಿತು ಸೋಮವಾರ ತೀರ್ಮಾನ ಹೊರಬೀಳಲಿದೆ.
ಈ ಸಂಬಂಧ ಸೋಮವಾರ ಉಭಯ ಜಿಲ್ಲೆಗಳ ಕೆಎಸ್‌ಆರ್‌ಟಿಸಿ ಬಸ್ಸು ಅಧಿಕಾರಿಗಳ ಮಾತುಕತೆ ನಡೆಯಲಿದ್ದು, ಸಭೆಯಲ್ಲಿ ಬಸ್ಸು ಸಂಚಾರ ಪುನರಾರಂಭದ ಬಗ್ಗೆ ಚರ್ಚಿಸಲಿದ್ದಾರೆ.
ಎರಡು ಜಿಲ್ಲೆಗಳ ನಡುವಿನ ಬಸ್ ಸಂಚಾರ ಸ್ಥಗಿತದಿಂದ ಉದೋಗ್ಯಸ್ಥರಿಗೆ ತೊಂದರೆಯಾಗುತ್ತಿದ್ದು, ಬಸ್ ಆರಂಭವಾಗಲಿ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
ಕಾಸರಗೋಡು – ಮಂಗಳೂರು ನಡುವೆ ಉಭಯ ರಾಜ್ಯಗಳ ನಡುವೆ ೮೦ ರಷ್ಟು ಬಸ್ಸುಗಳು ಸಂಚಾರ ನಡೆಸುತ್ತಿದ್ದು, ಕೋವಿಡ್ ಹಿನ್ನಲೆಯಲ್ಲಿ ಮಾರ್ಚ್‌ ಕೊನೆ ವಾರದಿಂದ ಸ್ಥಗಿತಗೊಳಿಸಲಾಗಿದ್ದ ಬಸ್ಸುಗಳು ಇನ್ನೂ ಆರಂಭಿಸಿಲ್ಲ. ಖಾಸಗಿ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡದಿರುವುದು ಕಾಸರಗೋಡಿನಿಂದ ದಿನಂಪ್ರತಿ ಮಂಗಳೂರಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಸೇರಿದಂತೆ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss