Sunday, August 14, 2022

Latest Posts

ಶೆಟ್ಟಿಗೌಡನದೊಡ್ಡಿ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವೆ : ಶಾಸಕ ಎ.ಮಂಜುನಾಥ್ ಭರವಸೆ

ರಾಮನಗರ: ತಾಲ್ಲೂಕಿನ ಬಿಡದಿ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ-೫ ಶೆಟ್ಟಿಗೌಡನದೊಡ್ಡಿಯಲ್ಲಿ ೧೪ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ ೧೩.೬೦ ಲಕ್ಷ ರೂ, ವೆಚ್ಚದಲ್ಲಿ ಆರ್ಸಿಸಿ ಚರಂಡಿಗಳು ಮತ್ತು ೬.೫೦ ಲಕ್ಷ ರೂ, ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಎ.ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಸ್ವರೂಪದಲ್ಲಿದ್ದ ಹಳ್ಳಿಗಳು ಬಿಡದಿ ಪುರಸಭೆಗೆ ಸೇರ್ಪಡೆಯಾಗಿದ್ದು, ಹಲವು ಸಮಸ್ಯೆಗಳು ನಮ್ಮ ಮುಂದೆ ಇವೆ, ಅವುಗಳನ್ನು ಆಧ್ಯತೆಯ ಮೇರೆಗೆ ಕೈಗೆತ್ತಿಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ. ಆಗಾಗಿ ಎಲ್ಲ ವಾರ್ಡ್ ಗಳಲ್ಲಿ ಶಾಸಕರ ಮತ್ತು ಪುರಸಭೆಗೆ ಸರ್ಕಾರದಿಂದ ಲಭ್ಯವಾಗುವ ವಿವಿಧ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಪುರಸಭಾ ಸದಸ್ಯರ ಸಹಕಾರದಲ್ಲಿ ಶಕ್ತಿಮೀರಿ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸದಲ್ಲಿ ನಿರತನಾಗಿದ್ದೇನೆ ಎಂದರು.

ಈ ವಾರ್ಡ್ ನಲ್ಲಿ ಇನ್ನು ಹಲವು ಕೆಲಸಗಳು ಆಗಬೇಕೆಂದು ನಾಗರೀಕರು, ವಾರ್ಡ್ ನ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟು, ಖುದ್ದು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಮನವಿಗೆ ಸ್ಪಂದಿಸಿದ ಶಾಸಕರು ಗ್ರಾಮದ ರಸ್ತೆಗಳಲ್ಲಿ ಸಂಚರಿಸಿ, ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳದಲ್ಲಿದ್ದ ಪುರಸಭಾ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೇ ಇನ್ನು ಹೆಚ್ಚಿನ ಅನುದಾನದಲ್ಲಿ ಶೆಟ್ಟಿಗೌಡನದೊಡ್ಡಿಯ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಪುರಸಭಾ ಸದಸ್ಯ ಬೋರೇಗೌಡ (ಹರೀಶ್) ಮಾತನಾಡಿ ಕರೇನಹಳ್ಳಿ ಗ್ರಾಮದಿಂದ ಹುಚ್ಚಮ್ಮನದೊಡ್ಡಿ ವರಗೆ ೪೦ ಲಕ್ಷ ರೂ ವೆಚ್ಚದ ರಸ್ತೆ ಡಾಂಬರೀಕರಣ, ನಗರೋತ್ಥಾನ ಯೋಜನೆಯಡಿ ೧೭ ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ, ೧೫ ಲಕ್ಷದಲ್ಲಿ ಪೈಪ್ ಲೈನ್ ಮತ್ತು ಪ್ರತಿ ಮನೆಗಳಿಗೆ ಕೊಳವೆ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ೨೦ ಲಕ್ಷ ವೆಚ್ಚದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಡದಿ ರೈತರ ಸೇವಾ ಸಹಕಾರ ಸಂಘದ ಅದ್ಯಕ್ಷ ನರಸಿಂಹಯ್ಯ, ಮಾಜಿ ಅಧ್ಯಕ್ಷ ರಾಮು, ಪುರಸಭಾ ಸದಸ್ಯರಾದ ಶಿವಕುಮಾರ್, ಸಂತೋಷ್ ಕುಮಾರ್, ಮುಖ್ಯಾಧಿಕಾರಿ ಆರ್.ರಮೇಶ್, ಇಂಜಿನಿಯರ್ ಶಿಲ್ಪಾ, ಬಿಲ್ ಕಲೆಕ್ಟರ್ ನಾಗರಾಜು, ಗುತ್ತಿಗೆದಾರರಾದ ಗೋಪಾಲಕೃಷ್ಣ, ತಿಲಕ್, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮನಹಳ್ಳಿ ರಮೇಶ್, ಚಿಕ್ಕಣ್ಣ, ಗ್ರಾಮದ ಮುಖ್ಯಸ್ಥರಾದ ಹೊಂಬಣ್ಣ, ರುದ್ರಪ್ಪ, ಚಂದ್ರಣ್ಣ, ಮಂಜು ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss